Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೇಖನಗಳು
  4. ಬೆಲೆ ಏರಿಕೆ ಬಿಸಿ:ಟೊಮೆಟೊ ದಾರಿಯಲ್ಲಿ...

ಬೆಲೆ ಏರಿಕೆ ಬಿಸಿ:ಟೊಮೆಟೊ ದಾರಿಯಲ್ಲಿ ಈರುಳ್ಳಿ?

ಪೂರ್ವಿಪೂರ್ವಿ23 Aug 2023 5:14 PM IST
share
ಬೆಲೆ ಏರಿಕೆ ಬಿಸಿ:ಟೊಮೆಟೊ ದಾರಿಯಲ್ಲಿ ಈರುಳ್ಳಿ?

ರೈತರ ಆಂದೋಲನದ ಹಿನ್ನೆಲೆಯಲ್ಲಿ ತರಕಾರಿ ಬೆಲೆಯಲ್ಲಿನ ಏರಿಕೆ ನರೇಂದ್ರ ಮೋದಿ ಸರಕಾರಕ್ಕೆ ಇಕ್ಕಟ್ಟಾಗಿ ಪರಿಣಮಿಸಿದೆ. ಒಂದು ಕಿಲೋ ಟೊಮೆಟೊ ಬೆಲೆ ಎರಡು ಲೀಟರ್ ಪೆಟ್ರೋಲ್ಗಿಂತ ಹೆಚ್ಚಾದದ್ದನ್ನು ನೋಡಿದೆವು. ಈಗ ಈರುಳ್ಳಿ ಬೆಲೆ ದ್ವಿಗುಣಗೊಂಡಿದೆ ಎಂಬ ವರದಿಗಳಿವೆ. ಆಹಾರ ಹಣದುಬ್ಬರ ದುಡಿಯುವ ವರ್ಗಗಳ ಜೇಬಿಗೆ ಭಾರೀ ಹೊಡೆತ ನೀಡುತ್ತಿದೆ.

ಇತರ ತರಕಾರಿಗಳ ಬೆಲೆಗಳೂ ಟೊಮೆಟೊ ಅಲೆಯಲ್ಲಿಯೇ ಸವಾರಿ ಮಾಡುತ್ತಿವೆ ಮತ್ತು ಈರುಳ್ಳಿ ಬೆಲೆ ಏರಿಕೆ ಹಣದುಬ್ಬರದ ಸುನಾಮಿಯನ್ನು ಹೆಚ್ಚಿಸುತ್ತಿದೆ. ಈರುಳ್ಳಿ ಅತ್ಯಂತ ರಾಜಕೀಯ ಸ್ವರೂಪದ್ದಾಗಬಲ್ಲ ತರಕಾರಿಯಾಗಿದ್ದು, ಸರಕಾರಗಳನ್ನೇ ಆತಂಕಕ್ಕೀಡು ಮಾಡುವ ತಾಕತ್ತು ಹೊಂದಿದೆ. ಟೊಮೆಟೊ ಕೂಡ ಬಹುತೇಕ ಅಷ್ಟೇ ಪ್ರಬಲವಾಗುತ್ತಿದೆ.

ಮಹಾರಾಷ್ಟ್ರದ ಪಿಂಪಲ್ಗಾಂವ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಈರುಳ್ಳಿ ಬೆಲೆ ಆಗಸ್ಟ್ ಆರಂಭದಲ್ಲಿ ಕ್ವಿಂಟಲ್ಗೆ 1,200 ರೂ. ಇದ್ದದ್ದು ಮೂರು ದಿನಗಳ ಅಂತರದಲ್ಲಿ 2,500 ರೂ.ಗೆ ಜಿಗಿದಿದೆ ಎಂದು ವರದಿ ಮಾಡಿತ್ತು. ದೇಶದ ಇತರ ಮಂಡಿಗಳಲ್ಲಿಯೂ ಬೆಲೆಗಳು ತೀವ್ರವಾಗಿ ಏರುತ್ತಿವೆ. ಭೋಜ್ಪುರ ಜಿಲ್ಲೆಯ ಅರ್ರಾ ಮಾರುಕಟ್ಟೆಯಲ್ಲಿ ಪ್ರತೀ ಕ್ವಿಂಟಲ್ಗೆ 2,600 ರೂ. ಮತ್ತು ಗುಜರಾತ್ನ ವಡೋದರ ಪದ್ರಾ ಮಾರುಕಟ್ಟೆಯಲ್ಲಿ ಬೆಲೆ 2,500 ರೂ. ದಾಟಿತ್ತು ಎಂದು ವರದಿಗಳು ಹೇಳುತ್ತಿವೆ.

ಈ ಉಲ್ಬಣವನ್ನು ಅರ್ಥಮಾಡಿಕೊಳ್ಳಲು, ಈರುಳ್ಳಿಯ ಪ್ರಮುಖ ಉತ್ಪಾದಕ ಪ್ರದೇಶವಾದ ಮಹಾರಾಷ್ಟ್ರದ ಲಾಸಲ್ಗಾಂವ್ ಮಂಡಿಯ ರೈತ ಶಂಕರ್ ದಾರೆಕರ್ ಅವರನ್ನು ಮಾತನಾಡಿಸಿದರೆ ಅವರು ಹವಾಮಾನ ಬದಲಾವಣೆ ಈರುಳ್ಳಿ ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಅನಿಯಮಿತ ಮಳೆ ಇತರ ರಾಜ್ಯಗಳ ಮೇಲೂ ಪರಿಣಾಮ ಬೀರಿದೆ ಮತ್ತು ತಡವಾದ ಬೆಳೆಗಳಿಗೆ ಕಾರಣವಾಗಿದೆ ಎಂದಿದ್ದಾರೆ ಅವರು.

ಮಾರುಕಟ್ಟೆ ಪೂರೈಕೆಯ ವಿಚಾರವಾಗಿ ಅವರು ಹೇಳಿರುವುದು ಹೀಗೆ: ‘‘ಈ ವರ್ಷ ನಮ್ಮ ಬೆಳೆ ಕಡಿಮೆಯಾಗಿದೆ, ಆದರೆ ಕೆಂಪು ಈರುಳ್ಳಿಗೆ ಇನ್ನೂ ಒಂದು ತಿಂಗಳು ಬಾಕಿಯಿದೆ. ಬೆಂಗಳೂರು ಬೆಳೆ 15 ದಿನ ತಡವಾಗಿದೆ. ಎಪ್ರಿಲ್ ಮತ್ತು ಮಾರ್ಚ್ನಲ್ಲಿ ಸುರಿದ ಮಳೆಯಿಂದಾಗಿ ಜಮೀನಿನಲ್ಲಿ ಮತ್ತು ಸಂಗ್ರಹಣೆಯಲ್ಲಿ ಬೆಳೆ ಹಾನಿಯಾಗಿದೆ. ವಿಪರೀತ ಆರ್ದ್ರತೆ ಇತ್ತು ಮತ್ತು ಇದರಿಂದಾಗಿ ಗೋಡೌನ್ಗಳಲ್ಲಿ ಈರುಳ್ಳಿ ಸಂಗ್ರಹಣೆ ಕಷ್ಟವಾಯಿತು. ಫಂಗಲ್ ರೋಗದಿಂದ ಹೆಚ್ಚಿನ ಬೆಳೆ ನಷ್ಟವಾಗಿದೆ, ತೇವಾಂಶದಿಂದಾಗಿ ಆವರಿಸುವ ರೋಗ ಇದು.’’

ಅವರು ಹೇಳುವುದನ್ನು ಗಮನಿಸಿದರೆ, ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ ಬೆಳೆ ವಿಚಾರದಲ್ಲಿನ ವೈಫಲ್ಯದೆಡೆಗೆ ಮತ್ತೊಮ್ಮೆ ಹೊರಳುತ್ತಿದ್ದೇವೆ ಎಂಬುದು ಮನವರಿಕೆಯಾಗುತ್ತದೆ. ಎರಡನೇ ಬಾರಿಗೆ ಸರಕಾರದ ಕಾರ್ಯವಿಧಾನಗಳು ಬೆಲೆಗಳನ್ನು ನಿಯಂತ್ರಿಸಲು ವಿಫಲವಾಗಿವೆ. ಎನ್ಎಎಫ್ಇಡಿ ಮತ್ತಿತರ ಏಜೆನ್ಸಿಗಳು, ಹತ್ತಿರವಾಗುತ್ತಿರುವ ಬಿಕ್ಕಟ್ಟಿನ ಬಗ್ಗೆ ಜಾಗರೂಕವಾಗಿರಬೇಕು ಮತ್ತು ಈರುಳ್ಳಿ ಗ್ರಾಹಕರು ಕಣ್ಣೀರು ಹಾಕುವ ಸ್ಥಿತಿ ತಲೆದೋರುವ ಮೊದಲು ಹಳೆಯ ದಾಸ್ತಾನನ್ನು ಬಿಡುಗಡೆ ಮಾಡಬೇಕಾಗುತ್ತದೆ.

ಮಹಾರಾಷ್ಟ್ರದ ರೈತ ಮತ್ತು ಸಂಘಟಕ ವಿಜಯ್ ಜವಾಂಧಿಯಾ ಪರ್ಯಾಯ ಸಾಧ್ಯತೆಯ ಕಡೆಗೆ ಗಮನ ಸೆಳೆಯುತ್ತಾರೆ: ‘‘ರಫ್ತುಗಳಿಂದಾಗಿ ಬೆಲೆಗಳು ಏರುತ್ತಿವೆ, ಇದು ಪ್ರತೀ ಟನ್ಗೆ 300ರಿಂದ 350 ಡಾಲರ್ ಆಗುತ್ತಿದೆ. ಪ್ರತೀ ಕೆಜಿಗೆ 24-25 ರೂ.ಗಳು ರಫ್ತು ಬೆಲೆಗಳಾಗಿವೆ. ಮಲೇಶ್ಯ, ಬಾಂಗ್ಲಾದೇಶ ಮತ್ತು ಕೆಲವು ಮಧ್ಯಪ್ರಾಚ್ಯ ದೇಶಗಳು ಪ್ರಮುಖ ತಾಣಗಳಾಗಿವೆ. ಅಲ್ಲದೆ, ಈರುಳ್ಳಿ ಬಿತ್ತನೆ ಮಾಡಿದ್ದ ಕೆಲ ಪ್ರದೇಶಗಳು ಅಕಾಲಿಕ ಮಳೆಯಿಂದ ನಷ್ಟ ಅನುಭವಿಸಿದ್ದು, ಪೂರೈಕೆ ಮತ್ತಷ್ಟು ಕಡಿಮೆಯಾಗಿದೆ. ರೈತರು ಈರುಳ್ಳಿ ಬೆಳೆಯನ್ನು ಮರು ಬಿತ್ತನೆ ಮಾಡಬೇಕಾದ ಸ್ಥಿತಿ ಎದುರಾಯಿತು. ಪರಿಣಾಮವಾಗಿ ಕೊಯ್ಲು ತಡವಾಯಿತು.

‘‘ರೈತ 2-3 ರೂ. ಪಡೆದಾಗ, ಯಾರೂ ದೂರು ನೀಡುವುದಿಲ್ಲ, ಆದರೆ ರೈತರು ಹೆಚ್ಚು ಪಡೆಯಲು ಪ್ರಾರಂಭಿಸಿದಾಗ, ಸರಕಾರ ಬೆಲೆಗಳನ್ನು ಕಡಿತಗೊಳಿಸುವ ಕ್ರಮಗಳನ್ನು ಪ್ರಾರಂಭಿಸುತ್ತದೆ. ಪ್ರತೀ ಕೆಜಿಗೆ 13-15 ರೂ. ಇದ್ದಾಗ ಸರಕಾರ ಕೊಯ್ಲು ಖರೀದಿಸಿ ಅದನ್ನು ಬಳಿಕ ಹಳೇ ದಾಸ್ತಾನಾಗಿ ಏಕೆ ಬಳಸಬಾರದು? ಆ ಮೂಲಕ ರೈತರು, ಸರಕಾರ ಮತ್ತು ಗ್ರಾಹಕರು ಎಲ್ಲರಿಗೂ ರಕ್ಷಣೆ ಸಿಕ್ಕಂತಾಗುತ್ತದಲ್ಲವೆ ಎಂಬುದು ಅವರ ಪ್ರಶ್ನೆ.

ತೊಂದರೆಯಲ್ಲಿದೆಯೇ ಆಹಾರ ಆರ್ಥಿಕತೆ?

ಗೋಧಿ ರಫ್ತು ನಿಷೇಧ, ಟೊಮೆಟೊ, ತರಕಾರಿಗಳು ಮತ್ತು ಈಗ ಈರುಳ್ಳಿ ಬೆಲೆಗಳ ಏರಿಕೆ ಇವು ದೇಶದಲ್ಲಿ ಆಹಾರ ಆರ್ಥಿಕತೆ ಸರಣಿ ಅಸ್ತವ್ಯಸ್ತವಾಗಿರುವುದನ್ನು ತೋರಿಸುತ್ತಿದೆ. ಅನಿಯಮಿತ ಹವಾಮಾನ ಇದನ್ನು ಇನ್ನಷ್ಟು ಹೆಚ್ಚಿಸುತ್ತದೆ. ತಾಜಾ ಉತ್ಪನ್ನಗಳ ಬೆಲೆಗಳು ಹೆಚ್ಚುವುದಕ್ಕೆ ಇದು ಕಾರಣವಾಗಿದೆ. ಇನ್ನೊಂದೆಡೆ, ಸರಕಾರದ ನೀತಿ ಮತ್ತು ಬೆಲೆ ಸ್ಥಿರೀಕರಣ ಕ್ರಮಗಳು ಸಂಪೂರ್ಣ ವಿಫಲವಾಗಿವೆ.

ಭಾರತ ಚಂದ್ರನತ್ತ ಸಾಗುತ್ತಿದೆ. ಆದರೆ ಆಹಾರ ಆರ್ಥಿಕತೆಯಲ್ಲಿನ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿದೆ, ಯೋಜನೆಯಿಂದ ಪ್ರಾರಂಭಿಸಿ ಸಮರ್ಥ ರಾಜಕೀಯ ನಿರ್ಧಾರ ತೆಗೆದುಕೊಳ್ಳುವಲ್ಲಿಯವರೆಗೂ ಈ ವೈಫಲ್ಯ ಮುಂದುವರಿಯುತ್ತದೆ. ರೈತರು ತಾವೇ ಹವಾಮಾನ ಸ್ಥಿತಿ ನೋಡಿಕೊಂಡು ಬೆಳೆಗಳನ್ನು ನಿರ್ಧರಿಸಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಹವಾಮಾನ ಮುನ್ಸೂಚನೆಗಾಗಿ ಸರಕಾರವೇನೋ ಲಕ್ಷಾಂತರ ವೌಲ್ಯದ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸುತ್ತಿದೆ. ಆದರೆ ರೈತರಿಗೆ ಹವಾಮಾನ ಎಚ್ಚರಿಕೆಗಳು ಮತ್ತು ಶೇಖರಣಾ ಸಲಹೆಗಳಿಗೆ ಯಾವುದೇ ನೀತಿ ನಿರ್ಧಾರಗಳಿಲ್ಲ. ಸಲಹೆಗಳನ್ನು ನೀಡಿದ್ದರೂ ಅವು ಪರಿಣಾಮಕಾರಿಯಾಗಿಲ್ಲ. ಈ ಬಾರಿ ಹೆಚ್ಚಿನ ಈರುಳ್ಳಿ ಬೆಳೆ ರೋಗಪೀಡಿತವಾಗಿತ್ತು ಅಥವಾ ಕೊಯ್ಲಿನ ಸಮಯದಲ್ಲಿ ಕಡಿಮೆ ಬೆಲೆಯಿಂದಾಗಿ ವ್ಯರ್ಥವಾಯಿತು.

ಈರುಳ್ಳಿ ರಫ್ತು ಸುಂಕ ಶೇ.40 ಏರಿಸುವ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧವಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.ರಫ್ತಿನ ಬಗೆಗಿನ ನೀತಿ ಕೂಡ ಇಲ್ಲವಾಗಿದೆ. ರಫ್ತನ್ನು ನಿಷೇಧಿಸುವುದು, ಮತ್ತೆ ನಿಷೇಧವನ್ನು ರದ್ದುಗೊಳಿಸುವುದು ಇಂಥ ಕ್ರಮಗಳಿಂದ ಸಣ್ಣ ಮತ್ತು ದೊಡ್ಡ ವ್ಯಾಪಾರಿಗಳಿಗೆ ಮತ್ತು ಅಂತಿಮವಾಗಿ ರೈತರಿಗೆ ದೊಡ್ಡ ಮಟ್ಟದಲ್ಲಿ ಆರ್ಥಿಕ ಹೊಡೆತ ಬೀಳುತ್ತಿದೆ. ಬೆಳೆಗಳನ್ನು ಮತ್ತು ಅವುಗಳ ರಫ್ತು ಮಿತಿಗಳನ್ನು ಅಳೆಯಲು ಒಂದು ಸೂತ್ರವನ್ನು ಹೊಂದಿರಬೇಕಿರುವುದು ಅವಶ್ಯವಾಗಿದೆ. ಕಳೆದೆರಡು ವರ್ಷಗಳಲ್ಲಿ ಗೋಧಿ ಮತ್ತು ಇತರ ಕೃಷಿ ಉತ್ಪನ್ನಗಳ ಅತಿಯಾದ ರಫ್ತಿನ ಕಾರಣದಿಂದಾಗಿ ಬೆಲೆಗಳು ಅಸ್ಥಿರವಾಗಿವೆ, ವಿಶೇಷವಾಗಿ ಕೊರತೆಯ ಸಮಯದಲ್ಲಿ ರಫ್ತು ಮಾಡಿರುವುದು ಇದಕ್ಕೆ ಕಾರಣ. ಆಹಾರ ಆರ್ಥಿಕತೆಯ ದುರ್ಬಲತೆ ಬಗ್ಗೆ ಸರಕಾರ ಎಚ್ಚೆತ್ತುಕೊಳ್ಳಬೇಕಾಗಿದೆ, ಏಕೆಂದರೆ ಪ್ರಸಕ್ತ ಈರುಳ್ಳಿ ಬೆಲೆ ಏರಿಕೆ, ಸರಕಾರದ ಆಹಾರ ನೀತಿಗೆ ಬೀಳುತ್ತಿರುವ ಮೂರನೇ ಹೊಡೆತವಾಗಿದೆ ಎಂದು ಅನೇಕರು ವಿಶ್ಲೇಷಿಸುತ್ತಾರೆ.

share
ಪೂರ್ವಿ
ಪೂರ್ವಿ
Next Story
X