ಮಲ್ಪೆ ಹೊಟೇಲ್‌ಗೆ ದಾಳಿ, ಹಲ್ಲೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಮಲ್ಪೆ, ಫೆ.22: ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹಝ್ರ ಶಿಫಾ ಅವರ ತಂದೆಯ ಮಲ್ಪೆ ಹೊಟೇಲಿಗೆ ಕಲ್ಲು ತೂರಾಟ ನಡೆಸಿ ಸಹೋದರನಿಗೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮಲ್ಪೆಯ ದೀಪಕ್ ಕುಮಾರ್, ಮನೋಜ್, ಸನಿಲ್‌ರಾಜ್ ಬಂಧಿತ ಆರೋಪಿಗಳು. ಇವರು ಫೆ.21ರಂದು ರಾತ್ರಿ 9ಗಂಟೆಗೆ ಮಲ್ಪೆಯ ಬಿಸ್ಮಿಲ್ಲಾ ಹೊಟೇಲ್‌ಗೆ ದಾಳಿ ನಡೆಸಿ ಹೊಟೇಲ್ ಮಾಲಕ ಹೈದರ್ ಅಲಿ ಅವರ ಮಗ ಸೈಫ್(20) ಹಲ್ಲೆ ನಡೆಸಿ, ಬಳಿಕ ಹೊಟೇಲಿನ ಕಿಟಕಿ ಗಾಜಿಗೆ ಕಲ್ಲೆಸೆದು ಹಾನಿ ಮಾಡಿದ್ದಾರೆಂದು ದೂರಲಾಗಿತ್ತು. ಅದರಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪೊಲೀಸರು ನೊಟೀಸ್ ಸಹ ನೀಡದೆ ನನ್ನ ಪತಿಯನ್ನು ಅಪಹರಿಸಿದ್ದಾರೆ: ನಟ ಚೇತನ್ ಪತ್ನಿ ಆರೋಪ
Next Story