ಬಾಗಲಕೋಟೆ | ಪೆಟ್ರೋಲ್ ಸುರಿದು ಶೆಡ್‌ಗೆ ಬೆಂಕಿ ಹಚ್ಚಿದ್ದ ಪ್ರಕರಣ : ಐಜಿಪಿ ಹೇಳಿದ್ದೇನು?
ಬಾಗಲಕೋಟೆ : ಜು.16ರಂದು ಮುಧೋಳ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ಪೆಟ್ರೋಲ್ ಸುರಿದು ಶೆಡ್‌ಗೆ ಬೆಂಕಿ ಹಚ್ಚಿದ್ದ ಪ್ರಕರಣದ ತನಿಖೆ ಚುರುಕುಗೊಂಡಿದೆ ಎಂದು ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ ವಿಕಾಸ್ ಕುಮಾರ್ ಹೇಳಿದರು.
ನಗರದ ಎಸ್ಪಿ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಮೂರು ಜನ ಮೃತಪಟ್ಟಿದ್ದಾರೆ. ಆಸ್ತಿ, ಅನೈತಿಕ ಸಂಬಂಧ, ಮಾಟಮಂತ್ರದ ಕಾರಣಕ್ಕೆ ಈ ಘಟನೆ ನಡೆದಿರುವುದು ಕಂಡು ಬಂದಿದೆ. ಸಂಬಂಧಿಕರೇ ಇಂತಹ ಕೃತ್ಯ ಎಸೆಗಿದ್ದು, ಮಾಟ ಮಂತ್ರ ಮಾಡಿಸಿದ ಓರ್ವ ವ್ಯಕ್ತಿ ಸೇರಿದಂತೆ ಇತರ ಇಬ್ಬರನ್ನು ಬಂಧಿಸಿಲಾಗಿದೆ. ಪ್ರಕರಣದಲ್ಲಿ ಅಮೀನಸಾಬ ಸಿರಾಜಸಾಬ ಪೆಂಡಾರಿ, ಬಾಬಾಲಾಲ ಸಿರಾಜ ಪೆಂಡಾರಿ, ಜಾಕೀರ ಹುಸೇನ ನದಾಫ್ ಮೂರು ಜನ ಆರೋಪಿತರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಕರಣ ಸಂಬಂಧ ಕೃತ್ಯಕ್ಕೆ ಬಳಸಿದ್ದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
Next Story