ದೊಡ್ಡಬಳ್ಳಾಪುರ | ದೀಪಾವಳಿ ಹಬ್ಬದಂದೇ ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ : ಆರೋಪ
ಸಾಂದರ್ಭಿಕ ಚಿತ್ರ(PC:Meta AI)
ಬೆಂಗಳೂರು : ದೀಪಾವಳಿ ಹಬ್ಬದಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮಲ್ಲಾತಹಳ್ಳಿಯ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನಿರಾಕರಣೆ ಆರೋಪ ಕೇಳಿಬಂದಿದೆ.
ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ನ.1ರಂದು ಗ್ರಾಮದ ಸರ್ವಣೀಯರು, ದಲಿತರು ಸೇರಿ ಕಲ್ಯಾಣೋತ್ಸವ ಆಯೋಜನೆ ಮಾಡಿದ್ದರು. ಈ ವೇಳೆ ದಲಿತರನ್ನು ದೇವಸ್ಥಾನದ ಒಳಗೆ ಬಿಡದೆ ಹೊರಗೆ ಕೂರಿಸಿ ಪೂಜೆ ಮಾಡಲಾಗಿದೆ. ಇದೇ ವಿಚಾರವಾಗಿ ದಲಿತರು ಮತ್ತು ಸವರ್ಣೀಯರ ಗುಂಪುಗಳ ನಡುವೆ ವಾಗ್ವಾದ ಉಂಟಾಗಿದೆ ಎಂದು ತಿಳಿದು ಬಂದಿದೆ.
ವಾಗ್ವಾದ ಉಂಟಾದ ಹಿನ್ನೆಲೆ ಘಟನೆ ಠಾಣೆ ಮೆಟ್ಟಿಲೇರಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಸ್ಪೃಶ್ಯತೆ ಆಚಾರಣೆಯ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಪೊಲೀಸರು, ಎರಡು ಸಮುದಾಯದ ಮುಖಂಡರ ನಡುವೆ ರಾಜಿ ಸಂಧಾನ ಮಾಡಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
Next Story