ಕನ್ನಡ ಎಂಬುವುದು ಕೇವಲ ಸಂವಹನದ ಭಾಷೆಯಲ್ಲ: ಜಿ. ಯಶೋಧ
ಬೆಂಗಳೂರು: ಕನ್ನಡ ಎಂಬುವುದು ಕೇವಲ ಸಂವಹನದ ಭಾಷೆಯಲ್ಲ ಕನ್ನಡಿಗರ ಅಸ್ಮಿತೆ. ಸಮಸ್ತ ಅಖಂಡ ಕರ್ನಾಟಕದ , ನಾಡಿನ ಜನತೆಯ ಬದುಕು, ಜೀವ , ಜೀವನಾಡಿ ಎಂದು ಸುಖಾಂಕ್ಷ ಚಾರಿಟಬಲ್ ಟ್ರಸ್ಟ್ (ರಿ) ಸಂಸ್ಥಾಪಕ ಅಧ್ಯಕ್ಷೆ ಜಿ. ಯಶೋಧ ಅಭಿಪ್ರಾಯಿಸಿದರು.
ಅವರಿಂದು ಸುವರ್ಣ ಕರ್ನಾಟಕ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಕಡಬಗೆರೆಯ ವೃದ್ಧಾಶ್ರಮದಲ್ಲಿ ಆಯೋಜಿಸಿದ್ದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ನಾಡಿನ ಸಮಸ್ತರಿಗೂ ರಾಜ್ಯೋತ್ಸವದ ಶುಭಾಷಯ ಸಲ್ಲಿಸಿದರು.
ಕರ್ನಾಟಕದ ಹಿರಿಮೆ ಸಾರುವ ಗೀತೆಗಳನ್ನು ಮತ್ತು ನಾಡಿನ ಪರಂಪರೆ ಇತಿಹಾಸ ಮೆರೆವ ಹಾಡುಗಳಿಗೆ ಸುಖಾಂಕ್ಷ ಹೆಣ್ಣು ಮಕ್ಕಳ ವಿಕಸನಾಲಯದ ಮಕ್ಕಳು ನೃತ್ಯ ಪ್ರದರ್ಶಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ಅಕ್ಷತಾ, ಅನಿತ, ರೇಣುಕಾ, ಕಿರಣ್ , ಹೇಮಂತ್ ಸೇರಿದಂತೆ. ವೃದ್ಧಾಶ್ರಮದ ಹಿರಿಯ ಚೇತನಗಳು ಮತ್ತು ಮಕ್ಕಳಾಶ್ರಮದ ಮಕ್ಕಳು ಸಾಕ್ಷೀಕರಿಸಿದರು.
Next Story