150 ಕೋಟಿ ರೂ.ಮೌಲ್ಯದ ಜಾಗ ವಶಕ್ಕೆ ಪಡೆದ ಬಿಡಿಎ
ಬೆಂಗಳೂರು: ನಗರದಲ್ಲಿರುವ ಎಚ್ಬಿಆರ್ ಬಡಾವಣೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿರುವ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿದ್ದ ಕಟ್ಟಡಗಳನ್ನು ತೆರವುಗೊಳಿಸಿ, 150 ಕೋಟಿ ರೂ. ಬೆಲೆಬಾಳುವ ಜಾಗವನ್ನು ಶನಿವಾರದಂದು ಬಿಡಿಎ ವಶಕ್ಕೆ ಪಡೆದಿದೆ.
ಹೆಚ್ಬಿಆರ್ ಬಡಾವಣೆಯ 1ನೇ ಹಂತ, ಕಾಚರಕನಹಳ್ಳಿ ಗ್ರಾಮದ ಸರ್ವೆ ನಂ. 181, 182 ಮತ್ತು 183ರಲ್ಲಿ ಪ್ರಾಧಿಕಾರಕ್ಕೆ ಸೇರಿರುವ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ವಶಕ್ಕೆ ಪಡೆದ ಜಾಗವು ಸುಮಾರು 150 ಕೋಟಿ ರೂ. ಬೆಲೆಬಾಳುವ 2.20 ಎಕರೆ ಜಾಗವಾಗಿದೆ.
ರಾಜ್ಯ ಸರಕಾರ 1985ರಲ್ಲಿ ಪ್ರಾಧಿಕಾರದ ಆಸ್ತಿ ಎಂದು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಹಾಗಾಗಿ ಭದ್ರತೆಯ ಹಿತದೃಷ್ಟಿಯಿಂದ 200 ಅಧಿಕಾರಿಗಳು ಸೇರಿದಂತೆ 100 ಜನ ಕಾರ್ಮಿಕರು ಹಾಗೂ 15 ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸಮ್ಮುಖದಲ್ಲಿ ತೆರವುಗೊಳಿಸಿ ಪ್ರಾಧಿಕಾರದ ಸುಪರ್ದಿಗೆ ತೆಗೆದುಕೊಳ್ಳಲಾಯಿತು.
Next Story