ಆರ್ಟಿಇ ಅಡಿಯಲ್ಲಿ 6,090 ಮಕ್ಕಳು ಆಯ್ಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ(ಆರ್ಟಿಇ) ಅಡಿಯಲ್ಲಿ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಉಚಿತ ಪ್ರವೇಶಕ್ಕೆ ಶುಕ್ರವಾರದಂದು ನಡೆದ ಮೊದಲ ಸುತ್ತಿನ ಲಾಟರಿಯಲ್ಲಿ 6,090 ಅರ್ಹ ಮಕ್ಕಳನ್ನು ಶಾಲೆಗಳಿಗೆ ಹಂಚಿಕೆ ಮಾಡಲಾಗಿದೆ.
2024-25ನೆ ಶೈಕ್ಷಣಿಕ ಸಾಲಿನಲ್ಲಿ ಆರ್ ಟಿಇಗೆ ಸಂಬಂಧಿಸಿ 15,895 ಅರ್ಜಿಗಳನ್ನು ಮೊದಲ ಸುತ್ತಿನ ಲಾಟರಿಗೆ ಪರಿಗಣಿಸಲಾಗಿತ್ತು. ಲಾಟರಿ ಪ್ರಕ್ರಿಯೆಯಲ್ಲಿ 6,090 ಅರ್ಹ ಮಕ್ಕಳನ್ನು ಶಾಲೆಗಳಿಗೆ ಹಂಚಿಕೆ ಮಾಡಲಾಗಿದ್ದು, ಆಯ್ಕೆಯಾದ ಮಕ್ಕಳ ಪೋಷಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಸೀಟು ಹಂಚಿಕೆ ಮಾಹಿತಿಯನ್ನು ನೀಡಲಾಗಿದೆ.
ಎಲ್ಲಾ ಪೋಷಕರು ಜೂ.8 ರಿಂದ ಜೂ.19ರೊಳಗೆ ಸಂಬಂಧಪಟ್ಟ ಶಾಲೆಗಳಿಗೆ ಸೀಟು ಹಂಚಿಕೆ ಪತ್ರದೊಂದಿಗೆ ಭೇಟಿ ನೀಡಿ ದಾಖಲಾತಿ ಮಾಡಲು ತಿಳಿಸಿದೆ. ಸೀಟು ಹಂಚಿಕೆ ವಿವರ ಇಲಾಖಾ ವೆಬ್ಸೈಟ್ www.schooleducation.karnataka.gov.in ಗೆ ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story