ಮರುಳಾರಾಧ್ಯ ಶಿವಾಚಾರ್ಯರ ವಿರುದ್ಧ ಕ್ರಮ : ಗೃಹ ಸಚಿವ ಡಾ.ಜಿ.ಪರಮೇಶ್ವರ್
ಡಾ.ಜಿ.ಪರಮೇಶ್ವರ್
ಬೆಂಗಳೂರು : 'ಮಕ್ಕಳ ಕೈಗೆ ಪೆನ್ನು ಕೊಡುವ ಬದಲು ತಲ್ವಾರ್ ಕೊಡಿ' ಎಂದು ಹೇಳಿಕೆ ನೀಡಿರುವ ಮರುಳಾರಾಧ್ಯ ಶಿವಾಚಾರ್ಯರರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳು ಧರ್ಮವನ್ನು ಪ್ರಚಾರ ಮಾಡುವಂತವರು, ಅವರು ಆ ತರಹದ ಪ್ರಚೋದನಕಾರಿ ಮಾತುಗಳನ್ನು ಆಡಬಾರದು ಎಂದಿದ್ದಾರೆ.
ಗೌರವಪೂರ್ವಕವಾಗಿ ಸ್ವಾಮೀಜಿಯವರ ಕಾಲಿಗೆ ಬೀಳುತ್ತೇವೆ. ಧರ್ಮವನ್ನು ರಕ್ಷಿಸುವ, ಎಲ್ಲರನ್ನೂ ಸರಿ ಸಮಾನರಾಗಿ ನೋಡುವಂತವರು ಅವರು, ಯುವಕರ ಕೈಗೆ ತಲ್ವಾರ್ ಕೊಡಿ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇನ್ನು, ಮರುಳಾರಾಧ್ಯ ಶಿವಾಚಾರ್ಯರ ಪ್ರಚೋದನಾ ಹೇಳಿಕೆ ಕುರಿತಂತೆ ಅಫಝಲ್ಪುರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
Next Story