ಆನೇಕಲ್: ರೌಡಿ ಶೀಟರ್ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು
ಆನೇಕಲ್, ಡಿ.16: ರೌಡಿ ಶೀಟರ್ ಒಬ್ಬನನ್ನು ಆನೇಕಲ್ ಉಪವಿಭಾಗದ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಘಟನೆ ಇಂದು ಮುಂಜಾನೆ ಆನೇಕಲ್-ಅತ್ತಿಬೆಲೆ ಮುಖ್ಯರಸ್ತೆಯ ಮಾಯಸಂದ್ರದ ಬಳಿ ನಡೆದಿದೆ.
ಆನೇಕಲ್ ಬೆಸ್ತಮಾನಹಳ್ಳಿಯ ಲೋಕೇಶ್ ಅಲಿಯಾಸ್ ಲೋಕಿ ಬಂಧಿತ ರೌಡಿ ಶೀಟರ್. ಈತನ ಬಲಗಾಲಿಗೆ ಗುಂಡಿಕ್ಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೋಕಿ ಈ ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು ರೌಡಿಶೀಟರ್ ಆಗಿದ್ದ. ಈತನಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸೆರೆ ಹಿಡಿಯುವುದಕ್ಕಾಗಿ ಇಂದು ಮುಂಜಾನೆ ಆನೇಕಲ್-ಅತ್ತಿಬೆಲೆ ಮುಖ್ಯರಸ್ತೆಯ ಮಾಯಸಂದ್ರದ ಬಳಿ ಹೊಂಚು ಹಾಕಿ ಕಾದು ಕುಳಿತಿದ್ದರು. ಬಂಧನಕ್ಕೆ ಮುಂದಾದಾಗ ಲೋಕಿ ಚಾಕುವಿನಿಂದ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದನೆನ್ನಲಾಗಿದೆ. ಈ ವೇಳೆ ಗಾಳಿಯಲ್ಲಿ ಪೊಲೀಸರು ಎಚ್ಚರಿಕೆ ನೀಡಿದರೂ ನಿರ್ಲಕ್ಷಿಸಿ ಹಲ್ಲೆ ಮಾಡಿದಾಗ ಜಿಗಣಿ ಪಿಎಸ್ಸೈ ಸಿದ್ದನಗೌಡ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
Next Story