ಬೆಂಗಳೂರು | ಚೀಟಿ ವ್ಯವಹಾರದ ಹೆಸರಿನಲ್ಲಿ ಹಣ ಪಡೆದು ವಂಚನೆ ಆರೋಪ : ದಂಪತಿ ವಶಕ್ಕೆ
ಬೆಂಗಳೂರು: ಚೀಟಿ ವ್ಯವಹಾರದ ಹೆಸರಿನಲ್ಲಿ ಹಣ ಪಡೆದು ವಂಚಿಸಿರುವ ಆರೋಪದಡಿ ದಂಪತಿಯನ್ನು ಇಲ್ಲಿನ ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಸಿದ್ದಲಿಂಗಯ್ಯ ಹಾಗೂ ಪ್ರೇಮಾ ಕುಮಾರಿ ಎಂಬುವರನ್ನು ಬಂಧಿತ ದಂಪತಿ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಪ್ರಕೃತಿನಗರದಲ್ಲಿ ಕೆಲವು ವರ್ಷಗಳಿಂದ ಶ್ರೀ ಸಾಯಿಲಕ್ಷ್ಮಿ ಕೃಪೆ ಚಿಟ್(ರಿ) ಹೆಸರಿನಲ್ಲಿ ಬಂಧಿತ ದಂಪತಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ಇತ್ತೀಚಿಗೆ ಚೀಟಿ ಹಣ ನೀಡದೇ ನಾಪತ್ತೆಯಾಗಿದ್ದು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರುಗಳು ಬಂದಿದ್ದವು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನು ವಂಚನೆಗೊಳಗಾಗಿರುವ ನೂರಾರು ಜನರು ಗುರುವಾರ ಬ್ಯಾಡರಹಳ್ಳಿ ಪೊಲೀಸ್ ಠಾಣೆಯೆದುರು ಜಮಾಯಿಸಿದ್ದರು.
Next Story