ಬೆಂಗಳೂರು | 65 ಕೋಟಿ ರೂ.ಮೌಲ್ಯದ ಜಾಗ ವಶಕ್ಕೆ ಪಡೆದ ಬಿಡಿಎ
ಬೆಂಗಳೂರು: ಒತ್ತುವರಿದಾರರಿಗೆ ಬೆಳ್ಳಂ ಬೆಳಗ್ಗೆ ಬಿಸಿ ಮುಟ್ಟಿಸಿರುವ ಬಿಡಿಎ ಅಧಿಕಾರಿಗಳು, ಇಲ್ಲಿನ ಕೊತ್ತನೂರು ಗ್ರಾಮದಲ್ಲಿ 65 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.
ಶನಿವಾರ ಬೆಳಗ್ಗೆಯೇ ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿಯ ಕೊತ್ತನೂರು ಗ್ರಾಮದ ಸರ್ವೆ ನಂ.38/1 ಬಳಿ ಕಾರ್ಯಾಚರಣೆ ಕೈಗೊಂಡ ಬಿಡಿಎ ಅಧಿಕಾರಿಗಳ ತಂಡ, ಜೆಸಿಬಿಗಳ ಮೂಲಕ ಅನಧಿಕೃತವಾಗಿ ನಿರ್ಮಾಣ ಮಾಡಿದ್ದ ಶೆಡ್ ಗಳನ್ನು ತೆರವುಗೊಳಿಸಿದರು.
ನಾಗರಿಕ ಸೌಲಭ್ಯ ನಿವೇಶನಗಳಲ್ಲಿ ತಲೆ ಎತ್ತಿದ್ದ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಕಾರ್ಯಾಚರಣೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕರು, ದಕ್ಷಿಣ ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನೆರವೇರಿಸಲಾಯಿತು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.
Next Story