ಬೆಂಗಳೂರು | ಲಿಫ್ಟ್ ಗುಂಡಿಗೆ ಬಿದ್ದು ಬಾಲಕ ಮೃತ್ಯು
ಸಾಂದರ್ಭಿಕ ಚಿತ್ರ
ಬೆಂಗಳೂರು : ಲಿಫ್ಟ್ ಕಾಮಗಾರಿಗೆಂದು ತೋಡಲಾಗಿದ್ದ ಗುಂಡಿಯಲ್ಲಿ 7 ವರ್ಷದ ಬಾಲಕನೊಬ್ಬ ಬಿದ್ದು ಮೃತಪಟ್ಟಿರುವ ಘಟನೆ ಇಲ್ಲಿನ ಕಾಡಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಮಂಗಲದ ಶ್ರೀಕನ್ಯಾ ಹಾಗೂ ಮುನಿರಾಜು ದಂಪತಿಯ 7 ವರ್ಷದ ಸುಹಾಸ್ ಗೌಡ ಎಂಬ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ಗುರುತಿಸಿದ್ದಾರೆ.
ಹಾಲಿನ ಡೇರಿ ಕಟ್ಟಡ ನಿರ್ಮಿಸುತ್ತಿದ್ದ ಸೊಣ್ಣಪ್ಪ ಅವರ ಪುತ್ರ ರವಿಕುಮಾರ್ ಇಲ್ಲಿನ ಕನ್ನಮಂಗಲದಲ್ಲಿ ಲಿಫ್ಟ್ ನಿರ್ಮಾಣಕ್ಕೆ ಗುಂಡಿಯನ್ನು ಅಗೆಸಿದ್ದರು. ಆಟವಾಡುವಾಗ ಕಾಲು ಜಾರಿ ಬಾಲಕ ಆ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಮಳೆಯಿಂದ ಆ ಗುಂಡಿಯಲ್ಲಿ ನೀರು ತುಂಬಿದ್ದರೂ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸದ ಹಿನ್ನೆಲೆಯಲ್ಲಿ ಒಂದು ಜೀವ ಬಲಿಯಾಗಿದೆ ಎಂದು ಮಗುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Next Story