ಬೆಂಗಳೂರು| 2023ರಲ್ಲಿ 89ಲಕ್ಷಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ: 184.83 ಕೋಟಿ ರೂ.ದಂಡ ವಸೂಲಿ
ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರಾದ್ಯಂತ 2023ರಲ್ಲಿ 89,74,945 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, 184.83 ಕೋಟಿ ರೂ.ದಂಡವನ್ನು ವಸೂಲಿ ಮಾಡಿರುವುದಾಗಿ ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಸಿಸಿ ಕ್ಯಾಮರಾ ಪರಿಶೀಲಿಸಿ 87,25,321 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ, ಸಂಚಾರಿ ಪೊಲೀಸರು ಖುದ್ದಾಗಿ 2,49,624 ಪ್ರಕರಣ ದಾಖಲಿಸಿದ್ದಾರೆ. 7,055 ಡ್ರಂಕ್ ಮತ್ತು ಡ್ರೈವ್ ಪ್ರಕರಣ ದಾಖಲು ಮಾಡಿದ್ದು, ಮದ್ಯಪಾನ ಮಾಡಿ ಅಪಘಾತ ಆರೋಪದಡಿ 16 ಪ್ರಕರಣ ದಾಖಲು ಮಾಡಲಾಗಿದೆ.
2023ರಲ್ಲಿ ಬೆಂಗಳೂರಿನಲ್ಲಿ ಒಟ್ಟು 4,095 ಅಪಘಾತ ಪ್ರಕರಣ ದಾಖಲಾಗಿದ್ದು, ಅವುಗಳಲ್ಲಿ 909 ಜನರು ಸಾವನ್ನಪ್ಪಿದ್ದರೆ, 4201 ಜನರು ಗಾಯಗೊಂಡಿದ್ದಾರೆ. ತುರ್ತು ಸಂದರ್ಭದಲ್ಲಿ ರೋಗಿಗಳ ಸ್ಥಳಾಂತರಕ್ಕೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿದ್ದು, 22 ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
Next Story