ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿ ಪ್ರಕಟ | ಗೌರವ ಪ್ರಶಸ್ತಿಗೆ ಭಾನುಮತಿ ನರಸಿಂಹನ್, ಗಾಯತ್ರಿ ಕೇಶವನ್ ಆಯ್ಕೆ
ಬೆಂಗಳೂರು : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2024-25ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಗೌರವ ಪ್ರಶಸ್ತಿಗೆ ಕರ್ನಾಟಕ ಸಂಗೀತ-ಗಾಯನ ವಿಭಾಗದಿಂದ ಭಾನುಮತಿ ನರಸಿಂಹನ್, ನೃತ್ಯ ವಿಭಾಗದಿಂದ ಗಾಯತ್ರಿ ಕೇಶವನ್ ಆಯ್ಕೆಯಾಗಿದ್ದಾರೆ.
ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ಸಂಗೀತ ವಿಭಾಗದಲ್ಲಿ ವಾನಾರಶಿ ಬಾಲಕೃಷ್ಣ ಭಾಗವತರ್, ಎಸ್.ವಿ.ಗಿರಿಧರ್, ನಾಗಭೂಷಣಯ್ಯ ಆಯ್ಕೆಯಾಗಿದ್ದಾರೆ. ಹಿಂದೂಸ್ತಾನಿ ಸಂಗೀತ ವಿಭಾಗದಲ್ಲಿ ಮಹದೇವಪ್ಪ ಪೂಜಾರ, ರವೀಂದ್ರ ಕಟೋಟಿ, ಅನಂತ ಭಾಗವತ್ ಆಯ್ಕೆಯಾಗಿದ್ದಾರೆ.
ನೃತ್ಯ ವಿಭಾಗದಲ್ಲಿ ಟಿ.ರವೀಂದ್ರಶರ್ಮ, ಅನುರಾಧ ವಿಕ್ರಾಂತ್, ಸುಗ್ಗನಹಳ್ಳಿ ಷಡಾಕ್ಷರಿ, ಬಿ.ಆರ್. ಹೇಮಂತ ಕುಮಾರ್, ಸುಗಮ ಸಂಗೀತ ವಿಭಾಗದಲ್ಲಿ ಸೂಗೂರೇಶ ಅಸ್ಕಿಹಾಳ್, ಎನ್.ಎಲ್. ಶಿವಶಂಕರ್, ಕಥಾಕೀರ್ತನ ವಿಭಾಗದಲ್ಲಿ ಕೆ.ಎನ್. ಕೃಷ್ಣಪ್ಪ, ಗಮಕ ವಿಭಾಗದಲ್ಲಿ ರತ್ನಾಮೂರ್ತಿ ಆಯ್ಕೆಯಾಗಿದ್ದಾರೆ.
ಅಕಾಡಮಿಯು ಸಂಘ-ಸಂಸ್ಥೆಗಳಿಗೂ ವಾರ್ಷಿಕ ಪ್ರಶಸ್ತಿಗಳನ್ನು ನೀಡುತ್ತಿದ್ದು, ಈ ವರ್ಷ ಗದಗದ ವೀರೇಶ್ವರ ಪುಣ್ಯಾಶ್ರಮ ಹಾಗೂ ಬೆಂಗಳೂರಿನ ಸುನಾದ ನಾದ ಕಲ್ಚರಲ್ ಸೆಂಟರ್ ಪ್ರಶಸ್ತಿಗಳಿಗೆ ಆಯ್ಕೆಯಾಗಿದೆ.