ಸಹಜ ಯೋಗದ ಮೂಲಕ ಪರಿವರ್ತನೆಯ ಅನುಭವ ಸಿಗಲಿದೆ : ಡಾ.ರಾಜೀವ್ ಕುಮಾರ್
ಬೆಂಗಳೂರು : ಸಹಜ ಯೋಗ ಎಂದರೆ ಅದೊಂದು ಪರಿವರ್ತನೆಯ ಅನುಭವ. ನಮ್ಮೊಳಗೆ ಒಂದು ಅಂತರ್ಗತವಾದ ಸೂಕ್ಷ್ಮ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದರ ಪ್ರಯೋಜನವನ್ನು ಪಡೆದುಕೊಳ್ಳುವುದು ನಮ್ಮ ಕರ್ತವ್ಯ ಎಂದು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್ ಹೇಳಿದರು.
ನಗರದ ಭಾರತ್ ಸ್ಕೌಟ್ಸ್ ಸಭಾಂಗಣದಲ್ಲಿ ಸಹಜ ಯೋಗ – ಇಂದಿನ ಮಹಾ ಯೋಗ ಕುರಿತಾಗಿ ಮಾಹಿತಿ ಜೊತೆಗೆ ಕಲಿಕೆಯನ್ನು ಉಚಿತವಾಗಿ ತಿಳಿಸಿಕೊಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ರಾಜೀವ್ ಅವರು, ʼನಮ್ಮ ಆಂತರಿಕ ಶಕ್ತಿಯನ್ನು ದೈವಿಕ ಶಕ್ತಿಯೊಂದಿಗೆ ಸಂಪರ್ಕಿಸುವುದೇ ಯೋಗ. ಅಲ್ಲದೆ ಸಹಜ ಯೋಗವನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಜೀವನದಲ್ಲಿ ಆಳವಾದ ಬದಲಾವಣೆಯನ್ನು ತರುತ್ತದೆ ಎಂದು ಹೇಳಿದರು.
ಬೆಂಗಳೂರಿನ ಲೈಫ್ ಎಟರ್ನಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಮನೋಜ್ ಕುಮಾರ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳಲ್ಲಿ ಇಂತಹ ಉಚಿತ ಒತ್ತಡ ನಿರ್ವಹಣೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ಸಹಜ ಯೋಗ ಸಿದ್ಧವಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕಿ, ಗಾಯಕಿ ಮಾನಸ ಹೊಳ್ಳ, ನಟಿ ರಾಧಿಕಾ ನಾರಾಯಣ್ ಉಪಸ್ಥಿತರಿದ್ದರು. ಸಂಗೀತ ನಿರ್ದೇಶಕ ಧನಂಜಯ ಧಮಾಲ್, ಸಿತಾರ ವಾದಕ ಡಾ.ಜಯಂತ ಕುಮಾರ್ ದಾಸ್, ನೃತ್ಯಪಟು ಪ್ರೀತಿ ಸಂಡೂರ ಹಾಗೂ ಕೊಳಲು ವಾದಕ ಶಕ್ತಿಧಾರ್, ರಾಜೇಂದ್ರಸಿಂಗ್ ಪವಾರ್, ಹಾರ್ಮೋನಿಯಂ, ವಿಕಾಸ್ ಜೈಸ್ವಾಲ್ ಗಿಟಾರ್ ಪಾಲ್ಗೊಂಡಿದ್ದರು.