ಬೆಂಗಳೂರು | ಇಂಡೋ-ಫ್ರೆಂಚ್ ಶೈಕ್ಷಣಿಕ, ಸಾಂಸ್ಕೃತಿಕ ಸಂಬಂಧಗಳಿಗೆ ಬಲ : ಮಾರ್ಕ್ ಲಾಮಿ
ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಸಾಕ್ಷಿಯಾದ ಲೀಸಾ ಸ್ಕೂಲ್ ವಸ್ತುಪ್ರದರ್ಶನ

ಬೆಂಗಳೂರು : ನಗರದ ಲಿಸಾ ಸ್ಕೂಲ್ ಆಫ್ ಡಿಸೈನ್ ವತಿಯಿಂದ ಎ.25 ರಿಂದ 27ರವರೆಗೆ ಮೂರು ದಿನಗಳ `ಓಪನ್ ಡೇಸ್ 2025' ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರಲ್ಲಿ ಫ್ಯಾಷನ್, ಇಂಟೀರಿಯರ್ ಮತ್ತು ಪ್ರಾಡಕ್ಟ್ ಡಿಸೈನ್, ಗ್ರಾಫಿಕ್ ಡಿಸೈನ್ ಮತ್ತು ಯುಐ/ಯುಎಕ್ಸ್ ವಿಭಾಗಗಳ ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಕ್ರಿಯಾಶೀಲತೆಗೆ ಅವಕಾಶ ಒದಗಿಸಿ ಕೊಡಲಾಗುತ್ತಿದೆ.
ಮೂರು ದಿನಗಳ ಈ ಕಾರ್ಯಕ್ರಮಕ್ಕೆ ಇಂದು ಫ್ರಾನ್ಸ್ ನ ಕೌನ್ಸಲ್ ಜನರಲ್ ಮಾರ್ಕ್ ಲಾಮಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ವಿನ್ಯಾಸದಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಮತ್ತು ಇಂಡೋ-ಫ್ರೆಂಚ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ಲಿಸಾ ಸ್ಕೂಲ್ ಅವರ ಬದ್ಧತೆಯನ್ನು ಶ್ಲಾಘಿಸಿದರು.
ಲಿಸಾ ಸ್ಕೂಲ್ ನ 'ಓಪನ್ ಡೇಸ್' ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸೃಜನಾತ್ಮಕ ವಿನ್ಯಾಸಗಳು ನಿಜಕ್ಕೂ ಸ್ಪೂರ್ತಿದಾಯಕವಾಗಿತ್ತು. ವಿದ್ಯಾರ್ಥಿಗಳು ಸುಂದರವಾದ ಉತ್ಪನ್ನಗಳನ್ನು ಮಾತ್ರ ರಚಿಸದೆ ಸುಸ್ಥಿರತೆ, ಸಾಮಾಜಿಕ ಬದಲಾವಣೆ ಮತ್ತು ಕ್ರಿಯಾಶೀಲ ವಿಚಾರಗಳೊಂದಿಗೆ ವಿನ್ಯಾಸಗಳನ್ನು ರಚಿಸಿದ್ದಾರೆ. ಈ ಯುವ ವಿನ್ಯಾಸಕರು ಮುಂದಿನ ದಿನಗಳಲ್ಲಿ ಜಾಗತಿಕವಾಗಿ ತಮ್ಮ ಛಾಪು ಮೂಡಿಸುತ್ತಾರೆಂದು ನನಗೆ ವಿಶ್ವಾಸವಿದೆ ಎಂದು ಹೇಳಿದರು.
ಕಾರ್ಯಕ್ರಮದ ಕುರಿತು ಲಿಸಾ ಬೆಂಗಳೂರು ನಿರ್ದೇಶಕ ಗಿರೀಶ್ ಕೆಸ್ವಾನಿ ಮಾತನಾಡಿ, ಓಪನ್ ಡೇಸ್' ಕಾರ್ಯಕ್ರಮ ವಿದ್ಯಾರ್ಥಿಗಳ ವಿನ್ಯಾಸ ಪ್ರದರ್ಶನಕ್ಕಿಂತ ಸೃಜನಾತ್ಮಕತೆ, ಸಮಸ್ಯೆ-ಪರಿಹರಿಸುವಿಕೆ, ಕಥೆ ಹೇಳುವಿಕೆ ಮತ್ತು ಸಹಭಾಗಿತ್ವಕ್ಕೆ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಲಿಸಾ ಸ್ಕೂಲ್ ಆಫ್ ಡಿಸೈನ್ ನಿರ್ದೇಶಕಿ ಅವಿ ಕೆಸ್ವಾನಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶನದ ಜೊತೆಗೆ ತಮ್ಮಲ್ಲಿರುವ ಕೌಶಲ್ಯವನ್ನು ವ್ಯಕ್ತಪಡಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ರಚಿಸಿರುವ ವಿಶೇಷ ವಿನ್ಯಾಸಗಳನ್ನು ಪ್ರದರ್ಶನ ಮಾಡಲಾಯಿತು. ಗ್ರಾಫಿಕ್ ಡಿಸೈನ್ ವಿದ್ಯಾರ್ಥಿಗಳು ವಿನ್ಯಾಸ, ಟೈಪೋಗ್ರಫಿ, ಮೋಷನ್ ಗ್ರಾಫಿಕ್ಸ್, ಜಾಹೀರಾತು, ಪ್ಯಾಕೇಜಿಂಗ್ ಮತ್ತು ಯುಐ/ಯುಎಕ್ಸ್ ವಿನ್ಯಾಸವನ್ನು ಒಳಗೊಂಡಿರುವ ಚಿಂತನೆಗಳನ್ನು ಪ್ರದರ್ಶಿಸಿದರು.