ಪ್ರತಾಪ್ ಸಿಂಹನನ್ನು ಕೊಚ್ಚೆಗೆ ಎಸೆಯಲಾಗಿದೆ : ಬಿಜೆಪಿ ನಾಯಕ ರೇಣುಕಾಚಾರ್ಯ ವಾಗ್ದಾಳಿ
"ನಾನು ನಿಮ್ಮ ಹಾಗೆ ಪೇಪರ್ ಸಿಂಹ ಅಲ್ಲ"
ರೇಣುಕಾಚಾರ್ಯ
ಬೆಂಗಳೂರು : ಮಾಜಿ ಸಂಸದ ಪ್ರತಾಪ್ ಸಿಂಹನನ್ನು ಕೊಚ್ಚೆಗೆ ಎಸೆಯಲಾಗಿದೆ ಎಂದು ಬಿಜೆಪಿ ನಾಯಕ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೇಪರ್ ಸಿಂಹ ನನ್ನ ಬಗ್ಗೆ ಮಾತಾಡಿದ್ದಾರೆ. ನಾನು ನಿಮ್ಮ ಹಾಗೆ ಪೇಪರ್ ಸಿಂಹ ಅಲ್ಲ. ನನಗೆ ನನ್ನ ಕ್ಷೇತ್ರದಲ್ಲಿಯೇ ಒಂದು ಸ್ಥಾನ ಮಾನ ಇದೆ. ನಿಮ್ಮನ್ನು ಕೊಚ್ಚೆಗೆ ಎಸೆಯಲಾಗಿದೆ. ಹೀಗಾಗಿಯೇ ಟಿಕೆಟ್ ಸಹ ನೀಡಿಲ್ಲ ಎಂದು ಟೀಕಿಸಿದರು.
ಮೈಸೂರು-ಕೊಡಗು ಭಾಗದಲ್ಲಿ ಎಷ್ಟು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರನ್ನು ಗೆಲ್ಲಿಸಿದ್ದೀರಿ. ನಿನಗೆ ಟಿಕೆಟ್ ಕೊಡಬಾರದು ಎಂದು ಯಾರೆಲ್ಲ ಪತ್ರ ಬರೆದಿದ್ದಾರೆಂದು ಗೊತ್ತು. ಇಂತಹವರ ಬಗ್ಗೆ ನಾನ್ಯಾಕೆ ಮಾತಾಡಲಿ? ಎಂದು ಅವರು ಟೀಕಿಸಿದರು.
Next Story