ದರ್ಶನ್ ಅವರನ್ನು ರೌಡಿಪಟ್ಟಿಗೆ ಸೇರ್ಪಡೆಗೆ ಬಿಎಸ್ಪಿ ಆಗ್ರಹ
ಬೆಳಗಾವಿ: ಗಂಭೀರ ಅಪರಾಧ ಪ್ರಕರಣಗಳ ಆರೋಪದಡಿ ಬಂಧನಕ್ಕೊಳಗಾಗಿರುವ ಚಿತ್ರನಟ ದರ್ಶನ್ ಹಾಗೂ ಆತನ ಸಹಚರರ ಮೇಲೆ ರೌಡಿ ಪಟ್ಟಿ ತೆರೆಯುವಂತೆ ಬಿಎಸ್ಪಿ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದ್ದಾರೆ.
ಶುಕ್ರವಾರ ಈ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದಿರುವ ಅವರು, ಚಿತ್ರನಟ ದರ್ಶನ್ ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿದೆ. ಈ ಹಿಂದೆಯೂ ಜೈಲಿಗೆ ಹೋಗಿದ್ದರು. ಹೀಗೆ, ವಿವಿಧ ಪ್ರಕರಣಗಳಲ್ಲಿ ಅವರು ಭಾಗಿಯಾಗಿರುವ ಕುರಿತು ದಾಖಲೆಗಳಿವೆ ಎಂದು ತಿಳಿಸಿದ್ದಾರೆ.
ಈ ರೀತಿಯ ಕ್ರಿಮಿನಲ್ ಅಪರಾಧಯುಳ್ಳ ದರ್ಶನ ಪರ ರಾಜ್ಯ ಸರಕಾರ ಯಾರ ಒತ್ತಡಕ್ಕೂ ಮಣಿಯದೆ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಲ್ಳಬೇಕು.ಜತೆಗೆ, ಈ ಕೂಡಲೇ ದರ್ಶನ್, ಆತನ ಸಹಚರರ ಮೇಲೆ ರೌಡಿಪಟ್ಟಿ ತೆರೆದು ಮೃತ ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
Next Story