ಮುಸ್ಲಿಂ ಬಾಂಧವ್ಯ ವೇದಿಕೆಯಿಂದ ಮುಖ್ಯಮಂತ್ರಿ ಭೇಟಿ

ಬೆಂಗಳೂರು : ರಾಜ್ಯದಲ್ಲಿ ಕೋಮುಸಾಮರಸ್ಯ ಪರಿಣಾಮಕಾರಿಯಾಗಿ ಸ್ಥಾಪನೆಯಾಗಲು ಸರಕಾರ ಅನುಸರಿಸಬೇಕಾದ 27 ಅಂಶಗಳ ಕಾರ್ಯಸೂಚಿಯನ್ನು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಘಟನೆ ಇಂದು(ಮಾ.4) ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿತು.
ಸಮುದಾಯಗಳ ನಡುವೆ ಸಮಸ್ಯೆ ಏರ್ಪಡಿಸುವುದೇ ನಿಜವಾದ ದೇಶದ್ರೋಹ. ಇಂತಹ ದೇಶದ್ರೋಹದ ಕೃತ್ಯದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷ ಭಾಗಿಯಾಗುವವರ ಕುರಿತು ಸರಕಾರ ಶೂನ್ಯ ಸಹನೆಯನ್ನು ಹೊಂದಬೇಕು. ಸಮುದಾಯಗಳ ನಡುವೆ ರಾಜಕೀಯ ಸಾಮಾಜಿಕ ಧಾರ್ಮಿಕ ಕಾರಣಗಳನ್ನು ಮುಂದಿಟ್ಟುಕೊಂಡು ಗಲಭೆ-ಸೃಷ್ಟಿಸುವವರನ್ನು ಜಾತಿ-ಧರ್ಮ ಭಾಷೆಗಳ ತಾರತಮ್ಯ ಮಾಡದೆ, ಕಠಿಣವಾಗಿ ಶಿಕ್ಷಿಸುವ ನೀತಿಗಳನ್ನು ರೂಪಿಸಬೇಕು ಎಂದು ವೇದಿಕೆ ಈ ಸಂದರ್ಭದಲ್ಲಿ ಆಗ್ರಹಿಸಿತು.
ವೇದಿಕೆ ನಿಯೋಗದಲ್ಲಿ ಗೌರವಾಧ್ಯಕ್ಷ ಕೋಟ ಇಬ್ರಾಹೀಂ ಸಾಹೇಬ್, ಅಧ್ಯಕ್ಷ ಸುಹೇಲ್ ಅಹ್ಮದ್ ಮರೂರ್, ಕಾರ್ಯದರ್ಶಿ ಡಾ.ಹಕೀಮ್ ತೀರ್ಥಹಳ್ಳಿ, ವಕ್ತಾರ ಮುಷ್ತಾಕ್ ಹೆನ್ನಾಬೈಲ್, ಮಾಜಿ ಅಧ್ಯಕ್ಷ ಅನೀಸ್ ಪಾಶ ದಾವಣಗೆರೆ, ಮುಝಫ್ಫರ್ ಹುಸೇನ್ ಪಿರಿಯಾಪಟ್ಟ, ಜಾಕಿರ್ ಹುಸೇನ್ ಮಂಗಳೂರು, ಅಬ್ದುಲ್ ರಹ್ಮಾನ್ ಬಿದರಕುಂದಿ, ಡಾ.ಶಫಿ ಮುಲ್ಲಾ ವಿಜಯಪುರ, ಚಮನ್ ಶರೀಫ್ ಹಿರಿಯೂರು, ರಫೀಕ್ ನಾಗೂರ್, ನಝೀರ್ ಬೆಳುವಾಯಿ, ಎಸ್.ಕೆ.ಇಬ್ರಾಹಿಂ, ಮುಹಮ್ಮದ್ ರಿಯಾಝ್ ಕಾರ್ಕಳ, ರಫೀಕ್ ಅಹ್ಮದ್ ಹುಲಿಯಾಳ, ದಸ್ತಗೀರ್ ಕಲಹಳ್ಳಿ ತುಮಕೂರು, ರೆಹ್ಮತ್ ದಾವಣಗೆರೆ, ಸಯ್ಯದ್ ಘನಿ ಖಾನ್ ಮಂಡ್ಯ ಮುಂತಾದವರು ಉಪಸ್ಥಿತರಿದ್ದರು.