110 ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಫ್ಲಾಸ್ಕ್, ಹಾಟ್‌ಬಾಕ್ಸ್ ವಿತರಣೆ

ಬೆಂಗಳೂರು : ಮೌಲಾನಾ ಶಬ್ಬೀರ್ ಅಹ್ಮದ್ ನದ್ವಿ ಹಾಗೂ ಹಾಫಿಝ್ ಆಸಿಮ್ ಅಬ್ದುಲ್ಲಾ ನೇತೃತ್ವದ ಆಲ್ ಇಂಡಿಯಾ ಪಯಾಮೆ ಇನ್ಸಾನಿಯತ್ ಫೋರಂ ಕರ್ನಾಟಕ ಘಟಕದ ನಿಯೋಗವು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಆಸ್ಪತ್ರೆಯಲ್ಲಿರುವ 110 ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಥರ್ಮಾಸ್ ಫ್ಲಾಸ್ಕ್ ಹಾಗೂ ಹಾಟ್ ಬಾಕ್ಸ್‌ಗಳನ್ನು ಶನಿವಾರ ವಿತರಣೆ ಮಾಡಿತು.
ಈ ಸಂದರ್ಭದಲ್ಲಿ ಡಾ.ಜಾವೀದ್ ಹುಸೇನ್, ಹಾಫಿಝ್ ಅಸದುಲ್ಲಾ, ಖೈಸರ್, ಸಿದ್ದೀಕ್ ಪಾಷಾ, ಸೈಫ್ ಅಲಿಖಾನ್, ಮೌಲಾನಾ ಸಗೀರ್ ಅಹ್ಮದ್ ಶರೀಫ್ ನದ್ವಿ, ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಮುಜೀಬುಲ್ಲಾ ಝಫಾರಿ, ಹಿದಾಯತುಲ್ಲಾ ಖಾನ್, ಮುರ‌್ರಮ್, ನಿವೃತ್ತ ಐಎಎಸ್ ಅಧಿಕಾರಿ ಮುಹಮ್ಮದ್ ಸನಾವುಲ್ಲಾ, ವೆಲ್ಫೇರ್ ಆಫ್ ಹ್ಯೂಮಾನಿಟಿ ಫೌಂಡೇಶನ್‌ನ ಮೌಲಾನಾ ರಿಝ್ವಾನ್ ಬೇಗ್ ಖಾಸ್ಮಿ ಇದ್ದರು.
Next Story