2025ರ ಸಾರ್ವತ್ರಿಕ-ಪರಿಮಿತ ರಜಾ ದಿನಗಳ ಘೋಷಿಸಿದ ಸರಕಾರ
ಬೆಂಗಳೂರು : ರಾಜ್ಯ ಸರಕಾರ 2025ನೇ ಸಾಲಿನ ಸಾರ್ವತ್ರಿಕ ಹಾಗೂ ಪರಿಮಿತ ರಜಾ ದಿನಗಳ ಪಟ್ಟಿಯನ್ನು ಘೋಷಣೆ ಮಾಡಿದೆ. ಈ ಪಟ್ಟಿಯಲ್ಲಿ ಒಟ್ಟು 19 ಸಾರ್ವತ್ರಿಕ ರಜೆ ನೀಡಲಾಗಿದ್ದರೆ, 20 ಪರಿಮಿತ ರಜೆಯನ್ನು ನೀಡಿ ಆದೇಶ ಹೊರಡಿಸಲಾಗಿದೆ. ಈ ಪಟ್ಟಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಸಾರ್ವತ್ರಿಕ ರಜಾ ದಿನಗಳು :
ಜ.14-ಉತ್ತರಾಯಣ ಪುಣ್ಯಕಾಲ ಹಾಗೂ ಮಕರ ಸಂಕ್ರಾಂತಿ, ಫೆ.26-ಮಹಾ ಶಿವರಾತ್ರಿ, ಮಾ.31-ಖುತುಬ್-ಎ-ರಂಜಾನ್, ಎ.10-ಮಹಾವೀರ ಜಯಂತಿ, ಎ.14-ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಎ.18-ಗುಡ್ ಫ್ರೈಡೇ, ಎ.30-ಬಸವ ಜಯಂತಿ ಹಾಗೂ ಅಕ್ಷಯ ತೃತೀಯಾ, ಮೇ.01-ಕಾರ್ಮಿಕ ದಿನಾಚರಣೆ, ಜೂ.07-ಬಕ್ರೀದ್, ಆ.15-ಸ್ವಾತಂತ್ರ್ಯ ದಿನಾಚರಣೆ, ಆ.27-ವರಸಿದ್ಧಿ ವಿನಾಯಕ ವ್ರತ, ಸೆ.05-ಈದ್ಮಿಲಾದ್, ಅ.01-ಮಹಾನವಮಿ, ಆಯುಧಪೂಜೆ, ವಿಜಯದಶಮಿ, ಅ.02-ಗಾಂಧಿ ಜಯಂತಿ, ಅ.07-ಮಹರ್ಷಿ ವಾಲ್ಮೀಕಿ ಜಯಂತಿ, ಅ.20-ನರಕ ಚತುರ್ದಶಿ, ಅ.22-ಬಲಿಪಾಡ್ಯಮಿ, ದೀಪಾವಳಿ, ನ.01-ಕರ್ನಾಟಕ ರಾಜ್ಯೋತ್ಸವ, ಡಿ.25-ಕ್ರಿಸ್ಮಸ್.
ಸರಕಾರಿ ನೌಕರರಿಗೆ ಇರುವ ಪರಿಮಿತ ರಜಾ ದಿನಗಳು: ಜ.01-ನೂತನ ವರ್ಷಾರಂಭ, ಫೆ.06-ಮಧ್ವ ನವಮಿ, ಫೆ.14-ಷಬ್-ಎ-ಬರಾತ್, ಮಾ.13-ಹೋಳಿ ಹಬ್ಬ, ಮಾ.27-ಷಬ್-ಎ-ಖಾದರ್, ಮಾ.28-ಜುಮತ್ -ಉಲ್-ವಿದಾ, ಎ.02- ದೇವರ ದಾಸಿಮಯ್ಯ ಜಯಂತಿ, ಎ.19-ಹೋಲಿ ಸ್ಯಾಟರ್ ಡೇ, ಮೇ.02-ಶ್ರೀ ಶಂಕರಾಚಾರ್ಯ ಜಯಂತಿ ಹಾಗೂ ಶ್ರೀ ರಾಮಾನುಜಾಚಾರ್ಯ ಜಯಂತಿ, ಮೇ.12-ಬುದ್ಧ ಪೂರ್ಣಿಮ, ಆ.08-ವರಮಹಾಲಕ್ಷ್ಮೀ ವ್ರತ, ಆ.16-ಶ್ರೀ ಕೃಷ್ಣ ಜನ್ಮಾಷ್ಟಮಿ, ಆ.26- ಸ್ವರ್ಣ ಗೌರಿ ವ್ರತ, ಸೆ.06-ಶ್ರೀ ಅನಂತಪದ್ಮನಾಭ ವ್ರತ, ಸೆ.08-ಕನ್ಯಾ ಮರಿಯಮ್ಮ ಜಯಂತಿ, ಸೆ.17-ವಿಶ್ವಕರ್ಮ ಜಯಂತಿ, ಅ.18-ತುಲಾ ಸಂಕ್ರಮಣ, ನ.05-ಗುರುನಾನಕ್ ಜಯಂತಿ, ಡಿ.05-ಹುತ್ತರಿ ಹಬ್ಬ, ಡಿ.24-ಕ್ರಿಸ್ಮಸ್.