ದಿ ಬ್ಯಾರಿಸ್ ವೆಲ್ಫೇರ್ ಅಸೋಸಿಯೇಷನ್ ಬೆಂಗಳೂರು ವತಿಯಿಂದ ಇಫ್ತಾರ್ ಕೂಟ
ಬದ್ರುದ್ದಿನ್ ಮಾಣಿ , ಯು. ಟಿ ಇಫ್ತಿಕಾರ್ ರಿಗೆ ಸನ್ಮಾನ

ಬೆಂಗಳೂರು : ದಿ ಬ್ಯಾರಿಸ್ ವೆಲ್ಫೇರ್ ಅಸೋಸಿಯೇಶನ್ ಬೆಂಗಳೂರು ಇದರ ವತಿಯಿಂದ ಇಫ್ತಾರ್ ಕೂಟ ಶುಕ್ರವಾರ ಬೆಂಗಳೂರಿನ ಹೆಚ್ ಬಿ ಆರ್ ಲೇಔಟ್ ನಲ್ಲಿರುವ ಬ್ಯಾರಿ ಸೌಹಾರ್ದ ಭವನದಲ್ಲಿ ನೆರವೇರಿತು.
ಬ್ಯಾರೀ ಸ್ ಅಸೋಸಿಯೇಷನ್ ಅಧ್ಯಕ್ಷ ಬಿ. ಎಮ್ ಫಾರೂಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬದ್ರುದ್ದಿನ್ ಮಾಣಿ ಮತ್ತು ಯು. ಟಿ ಇಫ್ತಿಕಾರ್ ರವರನ್ನು ಬ್ಯಾರಿ ಸಮುದಾಯದ ಪರವಾಗಿ ಸನ್ಮಾನಿಸಲಾಯಿತು
ವೇದಿಕೆಯಲ್ಲಿ ಸಯ್ಯದ್ ಮುಹಮ್ಮದ್ ಬ್ಯಾರಿ, ಸಚಿವ ರಹೀಮ್ ಖಾನ್, ಉಮ್ಮರ್ ಟಿ. ಕೆ, ಜಿ.ಎ ಬಾವ ಇಕ್ಬಾಲ್ ಅಹ್ಮದ್, ಡಾ. ಮಕ್ಸೂದ್ ಅಹ್ಮದ್ ಎ. ಬಿ ಬಜಾಲ್, ಸಿದ್ದೀಕ್ ಬ್ಯಾರಿ, ಶರೀಫ್ ಟಿ. ಕೆ, ತಸ್ಲೀಲ್ ಮುಹಮ್ಮದ್ ಇದ್ದರು.
ಆಸೀಫ್ ಅಹ್ಮದ್ ಅವರು ಕಾರ್ಯಕ್ರಮದ ನಿರ್ವಹಣೆ ಮಾಡಿದರು. ಅತ್ತೂರು ಚೈಯಬ್ಬ ಅವರು ಸನ್ಮಾನಿತರ ಸಾಧನಾ ಪತ್ರವನ್ನು ವಾಚಿಸಿದರು.
ಉಮರ್ ಯು. ಹೆಚ್, ಸುಲ್ತಾನ್ ಗೋಲ್ಡ್ ರಿಯಾಝ್, ಬಿ ಎಂ ಹನೀಫ್, ಬ್ಯಾರಿ ಜಮಾತ್ ಅಧ್ಯಕ್ಷ ಡಾ. ಹಮೀದ್ ಬೆಂಗಳೂರು, ಸೆಂಟ್ರಲ್ ಕಮಿಟಿ ಪಧಾಧಿಕಾರಿಗಳು, ಮಲಬಾರ್ ಅಸೋಸಿಯೇಷನ್ ನ ಪದಾಧಿಕಾರಿಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸದಸ್ಯರು ಮತ್ತು ಸಾವಿರಕ್ಕೂ ಮಿಕ್ಕ ಬ್ಯಾರಿ ಕುಟುಂಬಸ್ಥರು ಉಪಸ್ಥಿತರಿದ್ದರು.