ಕೆಎಸ್ಸಾರ್ಟಿಸಿಯಲ್ಲಿ ಟಿಕೆಟ್ ರಹಿತ ಪ್ರಯಾಣ | ಜೂನ್ನಲ್ಲಿ 5.97ಲಕ್ಷ ರೂ.ದಂಡ ವಸೂಲಿ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಜೂನ್ ತಿಂಗಳಿನಲ್ಲಿ ಸಂಸ್ಥೆ ವಾಹನಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ 3,610 ಮಂದಿ ಪ್ರಯಾಣಿಕರಿಂದ ಒಟ್ಟು 5.97ಲಕ್ಷ ರೂ.ದಂಡ ವಸೂಲಿ ಮಾಡಿದೆ.
ನಿಗಮವು ಟಿಕೆಟ್ ರಹಿತ ಪ್ರಯಾಣಿಕರ ಮೇಲೆ ನಿಗಾ ವಹಿಸಿದ್ದು, ಸಂಸ್ಥೆಯ ಬಸ್ಗಳಲ್ಲಿ ಪರಿಶೀಲನೆ ನಡೆಸಿ, 3,522 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 82,946 ರೂ.ಗಳನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದು, ತಪ್ಪಿತಸ್ಥರ ವಿರುದ್ಧ ಇಲಾಖಾ ರೀತ್ಯಾ ಶಿಸ್ತಿನ ಕ್ರಮ ಜರುಗಿಸಲಾಗಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.
Next Story