ಲೋಕಸಭಾ ಚುನಾವಣೆ | 47 ವಿಧಾನಸಭಾ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಿಸಿದ ಕಾಂಗ್ರೆಸ್
ಬೆಂಗಳೂರು : ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7ರಂದು ನಡೆಯಲಿರುವ ಮತದಾನದ ಹಿನ್ನೆಲೆಯಲ್ಲಿ 47 ವಿಧಾನಸಭಾ ಕ್ಷೇತ್ರಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ.
ಅರಭಾವಿ-ಶಾಸಕ ಕೆ.ಸಿ.ವೀರೇಂದ್ರ, ಔರಾದ್-ಶಾಸಕ ಪಿ.ರವಿಕುಮಾರ್, ಬಸವಕಲ್ಯಾಣ-ಶಾಸಕ ಪಿ.ಎಂ.ನರೇಂದ್ರ ಸ್ವಾಮಿ, ಬೆಳಗಾವಿ ದಕ್ಷಿಣ-ಶಾಸಕಿ ನಯನಾ ಜ್ಯೋತಿ ಝಾವರ್, ಬಳ್ಳಾರಿ-ಶಾಸಕ ಎಚ್.ವಿ.ವೆಂಕಟೇಶ್, ಭದ್ರಾವತಿ-ಶಾಸಕ ಕೆ.ಎಂ.ಶಿವಲಿಂಗೇಗೌಡ, ಬೀದರ್ ದಕ್ಷಿಣ-ಶಾಸಕ ಇಕ್ಬಾಲ್ ಹುಸೇನ್, ಬಿಜಾಪುರ ನಗರ-ಶಾಸಕ ರಿಝ್ವಾನ್ ಅರ್ಶದ್, ಬ್ಯಾಡಗಿ-ಶಾಸಕ ಡಾ.ಎಚ್.ಡಿ.ರಂಗನಾಥ್ ಹಾಗೂ ಬೈಂದೂರು-ಶಾಸಕ ಅಶೋಕ್ ಕುಮಾರ್ ರೈ.
ಚಿಕ್ಕೋಡಿ-ಶಾಸಕ ಎಚ್.ಡಿ.ತಮ್ಮಯ್ಯ, ಚಿಂಚೋಳಿ-ಶಾಸಕ ಕೆ.ಎಂ.ಉದಯ್, ದೇವದುರ್ಗ-ಶಾಸಕ ಸಿ.ಅನಿಲ್ ಕುಮಾರ್, ದೇವರಹಿಪ್ಪರಗಿ-ಶಾಸಕರಾದ ಎನ್.ಶ್ರೀನಿವಾಸ್ ಹಾಗೂ ಎಚ್.ಎಂ.ಗಣೇಶ್ ಪ್ರಸಾದ್, ಗದಗ-ಮನ್ಸೂರ್ ರಹ್ಮಾನ್ ಖಾನ್, ಗಂಗಾವತಿ-ಶಾಸಕ ಕೆ.ಹರೀಶ್ ಗೌಡ, ಗೋಕಾಕ್-ಶಾಸಕ ಕೆ.ಸಿ.ವೀರೇಂದ್ರ, ಗುಲ್ಬರ್ಗ ಗ್ರಾಮೀಣ-ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗೂ ಗುರುಮಿಠ್ಕಲ್-ಶಾಸಕ ಪ್ರಿಯಾ ಕೃಷ್ಣ.
ಹಗರಿಬೊಮ್ಮನಹಳ್ಳಿ-ಶಾಸಕ ಬಿ.ಶಿವಣ್ಣ, ಹರಪ್ಪನಹಳ್ಳಿ-ಶಾಸಕ ಪ್ರದೀಪ್ ಈಶ್ವರ್, ಹರಿಹರ-ಶಾಸಕ ಬಿ.ಜಿ.ಗೋವಿಂದಪ್ಪ, ಹಿರೇಕೆರೂರು-ಶಾಸಕ ಕೆ.ಎಸ್.ಆನಂದ್, ಹೊಸಪೇಟೆ-ಶಾಸಕ ಎನ್.ಎ.ಹಾರಿಸ್, ಹೂವಿನಹಡಗಲಿ-ಶಾಸಕ ಎನ್.ವೈ.ಗೋಪಾಲಕೃಷ್ಣ, ಹುಬ್ಬಳ್ಳಿ ಧಾರವಾಡ ಕೇಂದ್ರ-ರಕ್ಷಾ ರಾಮಯ್ಯ, ಹುಬ್ಬಳ್ಳಿ ಧಾರವಾಡ ಪಶ್ಚಿಮ-ಶಾಸಕ ಎಂ.ಕೃಷ್ಣಪ್ಪ, ಹುಕ್ಕೇರಿ-ಶಾಸಕ ಪಿ.ಪುಟ್ಟರಂಗ ಶೆಟ್ಟಿ ಹಾಗೂ ಹುಮ್ನಾಬಾದ್-ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ವಿಧಾನಪರಿಷತ್ ಸದಸ್ಯ ಎಸ್.ರವಿ.
ಖಾನಾಪುರ-ಶಾಸಕಿ ರೂಪಕಲಾ, ಕೊಪ್ಪಳ-ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಕುಮಟ-ಶಾಸಕ ಕೆ.ವೈ.ನಂಜೇಗೌಡ, ಕುಂದಗೋಳ-ವಿಧಾನಪರಿಷತ್ ಮಾಜಿ ಸದಸ್ಯ ಎಂ.ನಾರಾಯಣಸ್ವಾಮಿ, ಕುಷ್ಟಗಿ-ಶಾಸಕ ದರ್ಶನ್ ಧೃವನಾರಾಯಣ್, ಕಾನೂನು ಚಟುವಟಿಕೆಗಳು-ಶಾಸಕ ಎ.ಎಸ್.ಪೊನ್ನಣ್ಣ, ಲಿಂಗಸುಗೂರು-ಶಾಸಕ ಎಸ್.ಎನ್.ನಾರಾಯಣಸ್ವಾಮಿ, ನಿಪ್ಪಾಣಿ-ಶಾಸಕ ಡಿ.ರವಿಶಂಕರ್, ರಾಯಭಾಗ-ಶಾಸಕ ಕೊತ್ತೂರು ಜಿ.ಮಂಜುನಾಥ್ ಹಾಗೂ ರಾಯಚೂರು-ಶಾಸಕ ಡಾ.ಮಂಥರ್ ಗೌಡ.
ರಾಣೆಬೆನ್ನೂರು-ಶಾಸಕ ಟಿ.ರಘುಮೂರ್ತಿ, ಶಿಗ್ಗಾಂವ್-ಶಾಸಕ ರಮೇಶ್ ಬಂಡಿಸಿದ್ದೇಗೌಡ, ಶಿಕಾರಿಪುರ-ಶಾಸಕ ಕೆ.ಷಡಕ್ಷರಿ, ಶಿವಮೊಗ್ಗ-ಶಾಸಕ ಜಿ.ಎಚ್.ಶ್ರೀನಿವಾಸ್, ಶಿವಮೊಗ್ಗ ಗ್ರಾಮಾಂತರ-ಶಾಸಕ ಟಿ.ಬಿ.ಜಯಚಂದ್ರ, ಶಿರಹಟ್ಟಿ-ಶಾಸಕ ಎ.ಸಿ.ಶ್ರೀನಿವಾಸ್, ಸುರಪುರ ಉಪ ಚುನಾವಣೆ-ಶಾಸಕ ಶರತ್ ಕುಮಾರ್ ಬಚ್ಚೇಗೌಡ, ತೀರ್ಥಹಳ್ಳಿ-ಶಾಸಕ ಟಿ.ಡಿ.ರಾಜೇಗೌಡ ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಎಸ್.ಆರ್.ಶ್ರೀನಿವಾಸ್ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಿ ಆದೇಶಿಸಲಾಗಿದೆ.