ಮಡಿವಾಳ ಸಮುದಾಯದ ಶೈಕ್ಷಣಿಕ ಭವನಕ್ಕೆ 12 ಲಕ್ಷ ನೆರವು ನೀಡಿದ ಸಚಿವ ಝಮೀರ್ ಅಹ್ಮದ್ ಖಾನ್
ಬೆಂಗಳೂರು : ಮಡಿವಾಳ ಕಮ್ಯುನಿಟಿ ಫೆಡರೇಷನ್ ಗೆ ಗೃಹ ಮಂಡಳಿ ವತಿಯಿಂದ ರಿಯಾಯಿತಿ ದರದಲ್ಲಿ ನಿವೇಶನ ಮಂಜೂರು ಮಾಡಿಸಿದ್ದ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಅವರು ನಿವೇಶನದ ಮೊತ್ತ 52 ಲಕ್ಷ ರೂ. ಪೈಕಿ ಶೇ.20 ರಷ್ಟು 12 ಲಕ್ಷ ರೂ. ವೈಯಕ್ತಿಕವಾಗಿ ದೇಣಿಗೆ ನೀಡಿದರು.
ಶಾಸಕ ರಾಘವೇಂದ್ರ ಹಿಟ್ನಾಳ್, ಫೆಡರೇಷನ್ ನ ಡಾ.ರವಿ ಕುಮಾರ್, ಸಚಿವರ ವಿಶೇಷ ಅಧಿಕಾರಿ ವೆಂಕಟೇಶಯ್ಯ ಉಪಸ್ಥಿತರಿದ್ದರು.
ಇತ್ತೀಚಿಗೆ ಫೆಡರೇಷನ್ ನ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿದ್ದ ಸಚಿವರು ನೋಂದಣಿ ಸಮಯದಲ್ಲಿ ನಿವೇಶನದ ಮೊತ್ತದಲ್ಲಿ ಶೇ 20 ರಷ್ಟು ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇಂದು ಚೆಕ್ ನೀಡಿದರು.
Next Story