ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ ದೂರು
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ರಾಜಸ್ಥಾನದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಸುಳ್ಳು ಸುದ್ದಿ ಮತ್ತು ದ್ವೇಷವನ್ನು ಹರಡಿರುವುದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ಸಂಸ್ಥೆಗಳು ಹಾಗೂ ಕಾಳಜಿಯುಳ್ಳ ನಾಗರೀಕರಿಂದ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಈ ಬಗ್ಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳಾದ ಮನೋಜ್ ಕುಮಾರ್ ಮೀನಾ ಅವರನ್ನು ನಾಗರಿಕ ಸಂಸ್ಥೆಗಳು ಹಾಗೂ ಕಾಳಜಿಯುಳ್ಳ ನಾಗರೀಕರು ಭೇಟಿ ಮಾಡಿದ್ದಾರೆ.
ಮನೋಜ್ ಕುಮಾರ್ ಮೀನಾ ರವರನ್ನು ಭೇಟಿಯಾದ ತಂಡವು ಅವರಿಗೆ ಮೋದಿಯ ವಿರುದ್ಧ ನೀಡಿದ ದೂರಿನ ಜೊತೆ ಸಂವಿಧಾನ ಪೀಠಿಕೆ ಮತ್ತು ನೀತಿ ಸಂಹಿತೆ ನಿಯಮಗಳ ಪ್ರತಿಯನ್ನು ನೀಡಿತು. ಭಾರತೀಯ ಚುನಾವಣಾ ಆಯೋಗವು, ಕಾನೂನಿನ ಪ್ರಕಾರ ಮೋದಿಯವರು ನೀಡಿದ ಭಾಷಣದ ವಿರುದ್ಧ ಕ್ರಮ ಕೈಗೊಂಡು, ಅವರನ್ನು ಅನರ್ಹಗೊಳಿಸಬೇಕು ಮತ್ತು ಅವರನ್ನು ಪ್ರಚಾರ ಮಾಡುವುದರಿಂದ ನಿಷೇಧಿಸಬೇಕೆಂದು ಒತ್ತಾಯಿಸಿತು. ದ್ವೇಷ ಭಾಷಣ ಮಾಡುವ ಮೂಲಕ ಸಮಾಜದ ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡಿರುವುದಕ್ಕಾಗಿ ಅವರ ವಿರುದ್ಧ ಕೂಡಲೇ FIR ದಾಖಲಿಸುವಂತೆ ಒತ್ತಾಯಿಸಿತು. ಹಿಂದೂ ಸಮಾಜದ ವೋಟಿಗಾಗಿ ಸುಳ್ಳು ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದರ ಜೊತೆಗೆ ಮುಸ್ಲಿಂ ಸಮುದಾಯದ ಬಗ್ಗೆ ಹಲವು ಅಪಾಯಕಾರಿ ಚಿಂತನೆಗಳನ್ನು ಹಬ್ಬಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ರವರು ಪ್ರತಿಕ್ರಿಯಿಸಿ, ಈ ಘಟನೆಯು, ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ, ದೂರನ್ನು ಮುಖ್ಯ ಚುನಾವಣಾಧಿಕಾರಿಗಳಿಗೆ ರವಾನಿಸುವುದಾಗಿ ತಿಳಿಸಿದರು. ದ್ವೇಷ ಭಾಷಣಗಳು ನಡೆದಾಗ ನಾವು FIR ದಾಖಲಿಸುತಿದ್ದೇವೆ. ಆದರೆ ನಾವು ಯಾರನ್ನು ಚುನಾವಣಾ ಪ್ರಚಾರದಿಂದ ನಿರ್ಬಂಧಿಸಲು ನನಗೆ ಅಧಿಕಾರವಿಲ್ಲ” ಎಂದರು.
ದೂರನ್ನು ಸಲ್ಲಿಸಿದ ಸಂಸ್ಥೆಗಳು:
1. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL)
2. ಬಹುತ್ವ ಕರ್ನಾಟಕ
3. ಆಲ್ ಇಂಡಿಯಾ ಲಾಯೆರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (AILAJ)
4. ದ್ವೇಷ ಭಾಷಣದ ವಿರುದ್ಧ ಜನಾಂದೋಲನ
5. ಪೀಪಲ್ಸ್ ವಾಚ್
6. ನ್ಯಾಷನಲ್ ಫೆಡರೇಶನ್ ಫಾರ್ ಇಂಡಿಯನ್ ವಿಮೆನ್ (NFIW)
7. ನ್ಯಾಷನಲ್ ಅಲೈಯನ್ಸ್ ಆಫ್ ಪೀಪಲ್ಸ್ ಮೂವ್ಮೆಂಟ್ಸ್ (NAPM)
8. ನ್ಯೂ ಟ್ರೇಡ್ ಯೂನಿಯನ್ ಇನಿಶಿಯೇಟಿವ್ (NTUI)
9. ಹ್ಯೂಮನ್ ರೈಟ್ಸ್ ಫೋರಮ್ (HRF)
10. ಲಾ ಅಂಡ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್
11. ಸೇವ್ ದಿ ನೇಷನ್
12. ತಮಿಳುನಾಡು ಪೊದುಮೇಡೈ
13. ಭಾರತ್ ಜೋಡೋ ಅಭಿಯಾನ್, ಮುಂಬೈ
14. ಸ್ಟೂಡೆಂಟ್ಸ್ಪೀ ಫಾರ್ಪ ಪೀಪಲ್ಸ್ ಡೆಮಾಕ್ರಸಿಗಾಗಿ
15. ಆಲ್ ಇಂಡಿಯಾ ಡೆಮಾಕ್ರೆಟಿಕ್ ವಿಮೆನ್ಸ್ ಅಸೋಸಿಯೇಷನ್ (AIDWA)