ನಿವೃತ್ತ ಡಿಸಿಪಿ ಜಿ.ಎ.ಬಾವಾಗೆ ಅಮೆರಿಕಾದಲ್ಲಿ ‘ವಿಶ್ವ ಮಾನ್ಯ ಕನ್ನಡಿಗ’ ಗೌರವ ಪುರಸ್ಕಾರ
ವರ್ಜೀನಿಯಾ(ಅಮೇರಿಕ) : ಅಮೇರಿಕ ಕನ್ನಡ ಕೂಟಗಳ ಆಗರ (ಅಕ್ಕ) ನಡೆಸುವ ಪ್ರತಿಷ್ಠಿತ 12ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಅಕ್ಕ ಸಮ್ಮೇಳನ ಸಮಿತಿ ಮತ್ತು ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಜಂಟಿಯಾಗಿ ರಾಜ್ಯದ ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ರಾಷ್ಟ್ರಪತಿಗಳ ಚಿನ್ನದ ಪದಕ ಪುರಸ್ಕೃತ ನಿವೃತ್ತ ಡಿಸಿಪಿ ಜಿ.ಎ.ಬಾವಾ ಅವರಿಗೆ ‘ವಿಶ್ವ ಮಾನ್ಯ ಕನ್ನಡಿಗ-2024' ಗೌರವ ಪುರಸ್ಕಾರ ನೀಡಿ ಸನ್ಮಾನಿಸಿದೆ.
ಅಕ್ಕ ಸಮ್ಮೇಳನದ ಪ್ರಯುಕ್ತ ಆಯೋಜಿಸಿದ್ದ ಚಲನಚಿತ್ರೋತ್ಸವವನ್ನು ಜಿ.ಎ.ಬಾವಾ ಅವರು ಉದ್ಘಾಟಿಸಿದರು. ಈ ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಚಿವರಾದ ಎಚ್.ಆಂಜನೇಯ, ರಾಣಿ ಸತೀಶ್, ಅಕ್ಕ ಸಮ್ಮೇಳನ ಸಮಿತಿಯ ಮುಖಂಡರಾದ ಡಾ.ಅಮರನಾಥ ಗೌಡ, ಡಾ.ವಿಶ್ವಾಮಿತ್ರ ಹಳೆಕೋಟೆ, ಅಕ್ಕ ಅಧ್ಯಕ್ಷ ರವಿ ಬೋರೇಗೌಡ, ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ್, ಡಬ್ಲ್ಯೂ. ಕೆ.ಸಿ.ಸಿ ಅಧ್ಯಕ್ಷ ಕೆ.ಪಿ.ಮಂಜುನಾಥ್ ಸಾಗರ್, ಸರಕಾರದ ಜಂಟಿ ಆಯುಕ್ತರಾದ ಡಾ.ರಾಮಾನುಜ, ಮುಹಮ್ಮದ್ ರಫಿ ಪಾಷ ಮೊದಲಾದವರು ಉಪಸ್ಥಿತರಿದ್ದರು.