ದು.ಸರಸ್ವತಿ, ಡಾ.ನಟರಾಜ್ ಹುಳಿಯಾರ್ ಸಹಿತ ಹಲವರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ
ಸಾಂದರ್ಭಿಕ ಚಿತ್ರ
ಬೆಂಗಳೂರು: ಹಿರಿಯ ಲೇಖಕಿ ಡಾ.ದು.ಸರಸ್ವತಿ, ಡಾ.ನಟರಾಜ್ ಹುಳಿಯಾರ್, ಪ್ರೊ.ಎಚ್.ಎಸ್. ರಾಘವೇಂದ್ರರಾವ್, ವಿನಯ ಚೈತನ್ಯ ಸೇರಿ ಡಾ.ಎಚ್.ಎಂ.ಕುಮಾರಸ್ವಾಮಿ ಅವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2023ನೆ ಸಾಲಿನ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಕನ್ನಡ ಹಾಗೂ ಇತರ ಭಾಷೆಗಳ ನಡುವೆ ಭಾಷಾಂತರದಲ್ಲಿ ವಿಶೇಷ ಸಾಧನೆ ಮಾಡಿರುವ ವಿದ್ವಾಂಸರಿಗೆ ಕುವೆಂಪು ಭಾಷಾಭಾರತಿ ಪ್ರಾಧಿಕಾರವು 2023 ಹಾಗೂ 2024ನೆ ಸಾಲಿನ ಗೌರವ ಪ್ರಶಸ್ತಿಯನ್ನು ಘೋಷಣೆಮಾಡಿದ್ದು, ಡಾ.ಆರ್.ಕೆ.ಕುಲಕರ್ಣಿ, ಡಾ.ಕರೀಗೌಡ ಬೀಚನಹಳ್ಳಿ, ಡಾ.ರಾಜೇಂದ್ರ ಚೆನ್ನಿ, ಡಾ. ಬೋಡೆ ರಿಯಾಝ್ ಅಹ್ಮದ್, ಡಾ.ಬಸು ಬೇವಿನಗಿಡದ 2024ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಗೌರವ ಪ್ರಶಸ್ತಿಯು 50ಸಾವಿರ ರೂ.ಗಳ ನಗದು ಬಹುಮಾನ ಒಳಗೊಂಡಿದೆ. 2022, 2023ರಲ್ಲಿ ಪ್ರಥಮಾವೃತ್ತಿಯಲ್ಲಿ ಪ್ರಕಟವಾದ ಅನುವಾದಿತ ಕೃತಿಗಳಿಗೆ ವಿವಿಧ ವಿಭಾಗಗಳಲ್ಲಿ ನೀಡಲಾಗುವ ಪುಸ್ತಕ ಬಹುಮಾನಗಳಿಗೆ ಈಕೆಳಗಿನ ವಿವಿಧ ಎರಡು ವರ್ಷಗಳ ತಲಾ ಐದು ಕೃತಿಗಳು ಆಯ್ಕೆಯಾಗಿದ್ದು, ಪುಸ್ತಕ ಬಹುಮಾನವು 25 ಸಾವಿರ ನಗದು ಒಳಗೊಂಡಿದೆ ಎಂದು ಪ್ರಕಟನೆ ತಿಳಿಸಿದೆ.
2022ನೆ ಸಾಲಿನ ಪುಸ್ತಕ ಬಹುಮಾನಗಳು
ಮೈತ್ರೇಯಿ ಕರ್ನೂರು ಅನುವಾದಿಸಿರುವ ತೇಜೋ ತುಂಗಭದ್ರ, ಜಯಶ್ರೀ ಭಟ್ ಅನುವಾದಿಸಿರುವ ದಿ ಚಾಯ್ಸ್, ಜಯರಾಮರಾಜೇ ಅರಸ್ ಅವರು ಅನುವಾದಿಸಿರುವ ಹೆಣಹೊರುವವನ ವೃತ್ತಾಂತ, ವಿಕ್ರಮವಿಸಾಜಿ ಅವರ ದೇಹವೇ ದೇಶ, ಶಿಭಮಂಗಳ.ಎಂ.ಜಿಅನುವಾದಿಸಿರುವ ಜಾಲ ಕೃತಿಗಳು 2022ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿವೆ.
2023ನೇ ಸಾಲಿನ ಪುಸ್ತಕ ಬಹುಮಾನ
ಸುಕನ್ಯಾ ಕನರಳ್ಳಿ ಅನುವಾದಿಸಿರುವ Love and water Flow Together, ಶ್ರೀಧರ್ ಹೆಗ್ಗೋಡು ಅವರ ಪಾತ್ರ ಪ್ರವೇಶ, ವಿಕಾಸ್ ಆರ್.ಮೌರ್ಯ ಅನುವಾದಿಸಿರುವ ಅಂಬೇಡ್ಕರ್ ಜಗತ್ತು, ಎಸ್.ಜಿ.ಭಾಗ್ವತ್ ಅನುವಾದಿಸಿರುವ ನನ್ನ ಪಿತಾಮಹ :ಮಹಾತ್ಮಾ ಗಾಂಧಿ, ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಅನುವಾದಿಸಿರುವ ತೌಲನಿಕ ಧರ್ಮ ದರ್ಶನ ಕೃತಿಗಳು 2023ನೆ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿವೆ.