ಮಕ್ಕಳಿಗೆ ಅನುಭವ ಮಂಟಪದ ಮಹತ್ವ ತಿಳಿಸಿದ ಸಿಎಂ, ಸ್ಪೀಕರ್
ಬೆಳಗಾವಿ : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಕಲಾಪವನ್ನು ವೀಕ್ಷಿಸಲು ಬಂದ ಶಾಲಾ ಮಕ್ಕಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸ್ಪೀಕರ್ ಯು.ಟಿ.ಖಾದರ್ ಅನುಭವ ಮಂಟಪ ತೈಲವರ್ಣದ ಚಿತ್ರಕಲೆ ಎದುರು ವಚನ ಚಳವಳಿ, ಅನುಭವ ಮಂಟಪದ ಮಹತ್ವ, ಪ್ರಜಾಪ್ರಭುತ್ವ ಮತ್ತು ನಮ್ಮ ಸಂವಿಧಾನ ಕುರಿತಂತೆ ಮಾಹಿತಿ ವಿನಿಮಯ ಮಾಡಿಕೊಂಡರು. ಶಾಲಾ ಮಕ್ಕಳು ಪ್ರಜಾಪ್ರಭುತ್ವ ಮತ್ತು ಸಂವಿಧಾನ ಮೌಲ್ಯಗಳ ಕುರಿತು ಹೊಂದಿರುವ ತಿಳಿವಳಿಕೆ ಬಗ್ಗೆ ಖುಷಿಪಟ್ಟರು. ಈ ಸಂದರ್ಭದಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Next Story