ಇಸ್ರೇಲ್ ಜತೆ ಕೈಜೋಡಿಸುತ್ತಿರುವ ಕೇಂದ್ರ ಸರಕಾರದ ನಡೆ ಖಂಡನೀಯ : ಗೀತಾ ಹರಿಹರನ್
ಸುಶೀಲಾ ಗೋಪಾಲನ್ ನೆನಪಿನ 7ನೇ ರಾಷ್ಟ್ರೀಯ ಉಪನ್ಯಾಸ
ಬೆಂಗಳೂರು : ಎಲ್ಲಿ ಆಕ್ರಮಣದ ವಿರುದ್ಧ ಚಳವಳಿ ನಡೆಯುತ್ತಿದೆಯೂ ಆ ದೇಶಗಳ ಜತೆಗೆ ನಾವು ಗಟ್ಟಿಯಾಗಿ ನಿಲ್ಲಬೇಕು ಎಂಬುದನ್ನು ನಮ್ಮ ಇತಿಹಾಸ ತೋರಿಸಿಕೊಟ್ಟಿದೆ. ಆದರೆ ಕೇಂದ್ರ ಸರಕಾರ ಇಸ್ರೇಲ್ ಜತೆ ಸಾಂಸ್ಕೃತಿಕವಾಗಿ ಮಾತ್ರವಲ್ಲದೆ, ಶಸ್ತ್ರಾಸ್ತ್ರಗಳ ವಿಚಾರದಲ್ಲೂ ಕೈಜೋಡಿಸಿರುವುದನ್ನು ದೇಶದ ಪ್ರಜೆಗಳಾಗಿ ನಾವು ಪ್ರಶ್ನಿಸಬೇಕು ಎಂದು ಲೇಖಕಿ, ಸಾಮಾಜಿಕ ಕಾರ್ಯಕರ್ತೆ ಗೀತಾ ಹರಿಹರನ್ ಹೇಳಿದ್ದಾರೆ.
ಮಂಗಳವಾರ ನಗರದ ಸೌಹಾರ್ದ ಸಭಾಂಗಣದಲ್ಲಿ ಸುಶೀಲಾ ಗೋಪಾಲನ್ ಮೆಮೋರಿಯಲ್ ಟ್ರಸ್ಟ್ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಆಯೋಜಸಿದ್ದ 'ಸಂಘರ್ಷದ ನಡುವೆ, ನಲುಗಿದ ಮಹಿಳೆಯರು ಮತ್ತು ಮಕ್ಕಳುʼ ಕುರಿತ 7ನೇ ರಾಷ್ಟ್ರೀಯ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಅಕ್ಟೋಬರ್ 2023ರಿಂದ ಫೆಲೆಸ್ತೀನ್ ಮೇಲಿನ ದಾಳಿ ನಡೆಯುತ್ತಿದೆ. ದಾಳಿಯ ತೀವ್ರತೆ ಇಂದಿನವರೆಗೂ ಇದೆ. ಬರೋಬ್ಬರಿ 45,078 ಫೇಲೆಸ್ತೀನಿಯರನ್ನು ಹತ್ಯೆ ಮಾಡಲಾ ಗಿದೆ. ಅವರಲ್ಲಿ 15,492 ಮಕ್ಕಳು ಇರುವುದು ಆಂತಕ ಹುಟ್ಟಿಸಿದೆ.
1 ಲಕ್ಷದ 5ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 11 ಸಾವಿರಕ್ಕೂ ಅಧಿಕ ಜನರು ಕಾಣೆಯಾಗಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಸ್ಜಿಎಂಟಿ ಅಧ್ಯಕ್ಷೆ ಕೀರ್ತಿಸಿಂಗ್, ಪತ್ರಕರ್ತೆ ಪಾರ್ವತಿ ಮೆನನ್, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಪಿ.ಕೆ.ಶ್ರೀಮತಿ, ಪ್ರಧಾನ ಕಾರ್ಯದರ್ಶಿ ಮರಿಯಮ್ ಧವಳೆ, ಎಸ್ಜಿಎಂಟಿ ಕಾರ್ಯದರ್ಶಿ ಸುಧಾ ಸುಂದರ ರಾಮನ್, ಹೋರಾಟಗಾರ್ತಿ ಮೀನಾಕ್ಷಿ ಬಾಳಿ, ದೇವಿ ಮತ್ತಿತರರು ಉಪಸ್ಥಿತರಿದರು.