The Wire ಸಂವಾದದಲ್ಲಿ ಈ ಬಾರಿ ಪ್ರಕಾಶ್ ರಾಜ್ ಮುಖ್ಯ ಅತಿಥಿ
ಕಾರ್ಯಕ್ರಮದ ಟಿಕೆಟ್ ಖರೀದಿಸಿ ದಿ ವೈರ್ ಅನ್ನು ಬೆಂಬಲಿಸಿ
ಬೆಂಗಳೂರು: ಖ್ಯಾತ ಆನ್‌ಲೈನ್ ಸುದ್ದಿ ತಾಣ The Wire ಆಯೋಜಿಸುವ “ದಿ ವೈರ್ ಡೈಲಾಗ್ಸ್” ಆಗಸ್ಟ್ 6, ಭಾನುವಾರದಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಬಾರಿ ಖ್ಯಾತ ನಟ ಮತ್ತು ಹೋರಾಟಗಾರ ಪ್ರಕಾಶ್ ರಾಜ್ ಅವರು ಈ ಕಾರ್ಯಕ್ರಮದಲ್ಲಿ ದಿ ವೈರ್ ಸಂಪಾದಕಿ ಸೀಮಾ ಚಿಶ್ತಿ ಅವರೊಂದಿಗೆ ಸಂವಾದದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮವು ಬೆಂಗಳೂರಿನ ಸೈಂಟ್ ಜಾನ್ಸ್ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಟಿಕೆಟ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ಬಾರಿಯ “ದಿ ವೈರ್ ಡೈಲಾಗ್ಸ್” ನ ಮುಖ್ಯ ವಿಷಯ ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ಮೂಲಭೂತ ತತ್ವಗಳಲ್ಲಿ ಒಂದಾಗಿರುವ ಭ್ರಾತೃತ್ವ ಆಗಿದೆ. ಒಂದು ತತ್ವ, ಮನಃಸ್ಥಿತಿ, ಆಗಿ ಭ್ರಾತೃತ್ವದ ಮಹತ್ವ ಮತ್ತು ಅದು ಹೇಗೆ ವ್ಯಕ್ತಿಗಳ ಘನತೆ ಮತ್ತು ದೇಶದ ಒಗ್ಗಟ್ಟನ್ನು ಬಲಪಡಿಸುತ್ತದೆ ಎಂಬ ಕುರಿತು ಈ ಕಾರ್ಯಕ್ರಮದಲ್ಲಿ ಚರ್ಚೆ ನಡೆಯಲಿದೆ.
ಭಾರತಕ್ಕೆ ಭ್ರಾತೃತ್ವ ಹಿಂದೆಂದಿಗಿಂತಲೂ ಈಗ ಹೆಚ್ಚು ಹೇಗೆ ಅಗತ್ಯವಿದೆ ಎಂಬ ಕುರಿತು ಐದು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತರಾಗಿರುವ ಪ್ರಕಾಶ್ ರಾಜ್ ಅವರು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ.
ಇದೊಂದು ನೇರಾನೇರ, ನಿರ್ಭೀತಿಯ ಹಾಗೂ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆಯಾಗಲಿದೆ. ಈ ಕಾರ್ಯಕ್ರಮದ ನಂತರ ಪ್ರಕಾಶ್ ರಾಜ್ ಹಾಗೂ ದಿ ವೈರ್ ಸ್ಥಾಪಕ ಸಂಪಾದಕರಾದ ಸಿದ್ಧಾರ್ಥ್ ವರದರಾಜನ್ ಮತ್ತು ಎಂ ಕೆ ವೇಣು ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಈ ಕಾರ್ಯಕ್ರಮದ ಭಾಗವಾಗಿ ಖ್ಯಾತ ಕಲಾವಿದೆ, ಗಾಯಕಿ ಶಬ್ನಂ ವೀರ್‌ಮಣಿ ಅವರು ಕಬೀರ್ ಅವರ ರಚನೆಗಳನ್ನು ಹಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಬಗ್ಗೆ :
ಪ್ರಕಾಶ್ ರಾಜ್ ಪ್ರತಿಭಾನ್ವಿತ ಹಿರಿಯ ಬಹುಭಾಷಾ ನಟರಾಗಿದ್ದು ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಕಲಾವಿದರಾಗಿರುವ ಹೊರತಾಗಿ ಅವರು ರಾಜಕೀಯದಲ್ಲೂ ಕೈಯ್ಯಾಡಿಸಿ 2019 ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಜನರನ್ನು ಚಿಂತನೆಗೆ ಹಚ್ಚುವ ಅವರ #ಜಸ್ಟ್ ಆಸ್ಕಿಂಗ್ ಹ್ಯಾಶ್‌ಟ್ಯಾಗ್ ಟ್ವೀಟ್‌ಗಳು ಸಾಕಷ್ಟು ಜನಪ್ರಿಯವಾಗಿವೆಯಲ್ಲದೆ ಹಲವಾರು ಪ್ರಮುಖ ವಿಚಾರಗಳನ್ನು ಅಧಿಕಾರಸ್ಥರ ಮುಂದಿಟ್ಟಿದೆ.
ಶಬ್ನಂ ವೀರಮಣಿ ಅವರು ಖ್ಯಾತ ಡಾಕ್ಯುಮೆಂಟರಿ ತಯಾರಕಿಯಾಗಿದ್ದು ಸೃಷ್ಟಿ ಸ್ಕೂಲ್ ಆಫ್ ಆರ್ಟ್ಸ್ ಡಿಸೈನ್ ಎಂಡ್ ಟೆಕ್ನಾಲಜಿಯ ಭಾಗವಾಗಿದ್ದಾರೆ. ದೃಷ್ಟಿ ಮೀಡಿಯಾ ಆರ್ಟ್ಸ್ ಎಂಡ್ ಹ್ಯೂಮನ್ ರೈಟ್ಸ್ ಕಲೆಕ್ಟಿವ್ ಸಹ-ಸ್ಥಾಪಕಿಯಾಗಿಯೂ ಅವರು ಖ್ಯಾತಿ ಪಡೆದಿದ್ದಾರೆ. ರಾಜಸ್ಥಾನಿ ಕಬೀರ್ ಯಾತ್ರಾದಲ್ಲಿ ಆಕೆ ಕಬೀರ್ ಅವರ ಕೃತಿಗಳನ್ನು ಹಾಡಿದ್ದಾರೆ.
ಸೀಮಾ ಚಿಶ್ತಿ ಅವರು ದಿ ವೈರ್ ಸಂಪಾದಕಿಯಾಗಿದ್ದು ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ.
ಕಾರ್ಯಕ್ರಮದ ಟಿಕೆಟ್ ಖರೀದಿಸಿ ದಿ ವೈರ್ ಸುದ್ದಿತಾಣವನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ