ಕನ್ನಡ ಮನಸ್ಸು ಕರ್ನಾಟಕ ತಂಡದಿಂದ ಕಡಲೆಕಾಯಿ ಪರಿಷೆಯಲ್ಲಿ ಕನ್ನಡ ಉಳಿಸಿ ಅಭಿಯಾನ
ಬೆಂಗಳೂರು : ನಗರದ ಬಸವನಗುಡಿಯಲ್ಲಿ ನಡೆಯುತ್ತಿರುವ ಕಡಲೆಕಾಯಿ ಪರಿಷೆಯಲ್ಲಿ "ಕನ್ನಡವನ್ನು ಉಳಿಸಿ ಕನ್ನಡವನ್ನು ಬೆಳೆಸಿ" ಹೆಸರಿನಲ್ಲಿ ಕನ್ನಡ ಮನಸ್ಸು ಕರ್ನಾಟಕ ತಂಡ ವಿಶೇಷ ಅಭಿಯಾನವನ್ನು ನಡೆಸಿದ್ದಾರೆ.
ಕನ್ನಡದ ಕೆಲಸ ಮಾಡಲು ಯಾವ ಸ್ಥಳ ಆದರೇನು ? ಯಾವ ಸಮಯ ಆದರೇನು ? ಕನ್ನಡಕ್ಕಾಗಿ ದುಡಿಯುವ, ಹೋರಾಡುವ ಮನಸ್ಸು ಇರಬೇಕು ಎನ್ನುವ ಸಂದೇಶವನ್ನು ಕನ್ನಡ ಮನಸ್ಸುಗಳ ತಂಡ ನೀಡಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರವ ಪ್ರಸಿದ್ದ ಕಡಲೆಕಾಯಿ ಪರಿಷೆಯಲ್ಲಿ ಕನ್ನಡ ಮನಸ್ಸುಗಳು ಕರ್ನಾಟಕ ತಂಡ, ಭಾನುವಾರ ರಾತ್ರಿ "ಕನ್ನಡ ಬೆಳೆಸುವ ಮೊದಲು ಕನ್ನಡ ಬಳಸಿ, ಕನ್ನಡ ಸಾಮಾನ್ಯವಲ್ಲ ವಿಶೇಷ, ಕಲಿಯುವ ಹಂಬಲ ಮಕ್ಕಳಲ್ಲಿ ಬೆಳೆಸಿರಿ, ನಮ್ಮೂರ ಸರಕಾರಿ ಶಾಲೆಯ ಮಕ್ಕಳ ಬಾಳು ಬೆಳಗಿಸಿ" ಎನ್ನುವ ಬಿತ್ತಿಪತ್ರ ಗಳನ್ನು ಹಿಡಿದು ಸಾರ್ವಜನಿಕರಲ್ಲಿ ಕನ್ನಡ ಬಳಕೆಯ ಬಗ್ಗೆ ಜಾಗೃತಿ ಅಭಿಯಾನವನ್ನು ನಡೆಸಿದರು.
Next Story