‘ಆತ್ಮಹತ್ಯೆ’ ಪ್ರಕರಣ : ಸರಕಾರದ ವಿರುದ್ಧ ರಣತಂತ್ರ ರೂಪಿಸಲು ಆಂದೋಲನ ಸಮಿತಿ ರಚಿಸಿದ ಬಿಜೆಪಿ
ಸಾಂದರ್ಭಿಕ ಚಿತ್ರ | PC :PTI
ಬೆಂಗಳೂರು : ರಾಜ್ಯದಲ್ಲಿ ಸರಣಿ ಆತ್ಮಹತ್ಯೆ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ರಣತಂತ್ರ ರೂಪಿಸುವ ಸಲುವಾಗಿ ರಾಜ್ಯ ಬಿಜೆಪಿ ಛಲವಾದಿ ನಾರಾಯಣಸ್ವಾಮಿ, ಅಗರ ಜ್ಞಾನೇಂದ್ರ ಸೇರಿ 18 ಸದಸ್ಯರನ್ನೊಳಗೊಂಡ ಆಂದೋಲನ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಆರಗ ಜ್ಞಾನೇಂದ್ರ, ಅಶ್ವಥ್ ನಾರಾಯಣ, ಬಸವರಾಜ ಮತ್ತಿಮೂಡ್, ಮಾಜಿ ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್, ಎನ್.ಮಹೇಶ್, ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಭಾರತಿ ಶೆಟ್ಟಿ, ಹೇಮಲತಾ ನಾಯಕ್, ಕೆ.ಎಸ್.ನವೀನ್, ಮಾಜಿ ಶಾಸಕ ರಾಜುಗೌಡ, ಬಿಜೆಪಿ ಮುಖಂಡರಾದ ಚಂದು ಪಾಟೀಲ್, ಭಾಸ್ಕರ್ ರಾವ್, ವೆಂಕಟೇಶ ದೊಡ್ಡೇರಿ, ರಾಜ್ಯ ಸಂಚಾಲಕರ(ಕಾನೂನು ಪ್ರಕೋಷ್ಠ) ವಸಂತಕುಮಾರ್, ರಾಜ್ಯ ಸಂಚಾಲಕರು(ಮಾಧ್ಯಮ ವಿಭಾಗ) ಕರುಣಾಕರ್ ಖಾಸಲೆ, ರಾಜ್ಯ ಕಾರ್ಯದರ್ಶಿ ಲಲಿತಾ ಅನಪೂರ್, ಮಾಜಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಸಮಿತಿಯಲ್ಲಿದ್ದಾರೆ.
Next Story