ನಿಖರ ಮತದಾನ ಪ್ರಮಾಣ ಪ್ರಕಟಿಸಿದ ಚುನಾವಣಾ ಆಯೋಗ

ಬೆಂಗಳೂರು: ಮೊದಲ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮತದಾನ ಸಂಬಂಧ ಪ್ರಮಾಣದ ಪರಿಷ್ಕೃತ ವರದಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಅದರಂತೆ ರಾಜ್ಯದಲ್ಲಿ ಶೇ.69.56ರಷ್ಟು ಮತದಾನ ನಡೆದಿದೆ.
ಮಂಡ್ಯ ಕ್ಷೇತ್ರದಲ್ಲಿ ಗರಿಷ್ಠ ಅಂದರೆ ಶೇ.81.67ರಷ್ಟು ಮತದಾನವಾಗಿದ್ದು, ಬೆಂಗಳೂರು ದಕ್ಷಿಣದಲ್ಲಿ ಕನಿಷ್ಠ ಅಂದರೆ ಶೇ.53.17ರಷ್ಟು ಮತದಾನವಾಗಿದೆ ಎಂದು ಚುನವಾವಣಾ ಆಯೋಗ ಮಾಹಿತಿ ನೀಡಿದೆ.
ಉಡುಪಿ-ಚಿಕ್ಕಮಗಳೂರು ಶೇ.77.15, ಹಾಸನ ಶೇ.77.68, ದಕ್ಷಿಣ ಕನ್ನಡ ಶೇ.77.56, ಚಿತ್ರದುರ್ಗ ಶೇ.73.30, ತುಮಕೂರು ಶೇ.78.05, ಮಂಡ್ಯ ಶೇ.81.67, ಮೈಸೂರು ಶೇ.70.62, ಚಾಮರಾಜನಗರ ಶೇ.76.81ರಷ್ಟು ಮತದಾನ ನಡೆದಿದೆ.
ಬೆಂಗಳೂರು ಗ್ರಾಮಾಂತರ ಶೇ.68.30, ಬೆಂಗಳೂರು ಉತ್ತರ ಶೇ.54.45, ಬೆಂಗಳೂರು ಕೇಂದ್ರ ಶೇ.54.06, ಬೆಂಗಳೂರು ದಕ್ಷಿಣ ಶೇ.53.17, ಚಿಕ್ಕಬಳ್ಳಾಪುರ ಶೇ.77, ಕೋಲಾರ ಶೇ.78.27ರಷ್ಟು ಮತ ಚಲಾವಣೆಯಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
Next Story