ಬಿಜೆಪಿಯಲ್ಲಿ ಸಮಸ್ಯೆ ಇದೆ, 10-15 ದಿನಗಳಲ್ಲಿ ಭಿನ್ನಮತ ಸರಿ ಆಗುತ್ತದೆ : ಆರ್.ಅಶೋಕ್

ಆರ್.ಅಶೋಕ್
ಬೆಂಗಳೂರು : ಬಿಜೆಪಿಯಲ್ಲಿ ಸಮಸ್ಯೆ ಇದೆ. ಈಗಾಗಲೇ ಹೈಕಮಾಂಡ್ ನಾಯಕರು ಇತ್ತ ಗಮನ ಕೊಟ್ಟಿದ್ದು, ಪಕ್ಷದೊಳಗಿನ ಭಿನ್ನಮತ 10-15 ದಿನಗಳಲ್ಲಿ ಸರಿ ಆಗುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಬಿಜೆಪಿ ಭಿನ್ನಮತ ವಿಚಾರದ ಕುರಿತು ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯಲ್ಲಿನ ಬಣ ರಾಜಕೀಯ, ಭಿನ್ನಮತ ಹೇಳಿಕೆಗಳನ್ನು ಕೇಂದ್ರದ ನಾಯಕರು ಪರಿಗಣಿಸಿದ್ದಾರೆ. ಮುಂದಿನ 10-15 ದಿನಗಳಲ್ಲಿ ಎಲ್ಲ ಸಮಸ್ಯೆಯೂ ಸರಿ ಆಗುತ್ತದೆ ಎಂದರು.
ನಮ್ಮಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೂ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟ ನಿಂತಿಲ್ಲ. ಸರಕಾರದ ಎಲ್ಲ ನ್ಯೂನ್ಯತೆಗಳನ್ನು ಜನರ ಮುಂದಿಡುವಲ್ಲಿ ನಾವು ಸಮರ್ಥರಾಗಿದ್ದೇವೆ. ಬಲಿಷ್ಠ ಕಾಂಗ್ರೆಸ್ ಸರಕಾರವನ್ನು ಅಲ್ಲಾಡಿಸಿದ್ದೇವೆ ಎಂದು ಆರ್.ಅಶೋಕ್ ಹೇಳಿದರು.
ನಮ್ಮ ಪಕ್ಷದ ಸಮಸ್ಯೆಯನ್ನು ಹೈಕಮಾಂಡ್ ನಾಯಕರು ಸರಿ ಮಾಡುತ್ತಾರೆ. ಶ್ರೀರಾಮುಲು ಇಂದು(ಜ.28) ಬೆಂಗಳೂರಿಗೆ ಬರುತ್ತಾರೆ. ನನ್ನೊಂದಿಗೆ ಎಲ್ಲವನ್ನೂ ಮಾತನಾಡುತ್ತೇನೆಂದು ಅವರೇ ಹೇಳಿದ್ದು, ಎಲ್ಲವೂ ಸರಿ ಆಗುತ್ತದೆ ಎಂದು ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.