ಬೆಳಗಾವಿ | ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ತಾಯಿ ಆತ್ಮಹತ್ಯೆ

ಬೆಳಗಾವಿ : ಮೂವರು ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಬಳಿ ನಡೆದಿದೆ.
ಮೃತರನ್ನು ತಾಯಿ ಶಾರದಾ ಢಾಲೆ (38) ಮತ್ತು ಮಕ್ಕಳಾದ ಅನುಶಾ ಢಾಲೆ(10), ಅಮೃತಾ ಢಾಲೆ(14) ಆದರ್ಶ ಢಾಲೆ (8) ಎಂದು ಗುರುತಿಸಲಾಗಿದೆ.
ಪತಿ ಅಶೋಕ್ ಕಿರುಕುಳದಿಂದ ಬೇಸತ್ತು ಶಾರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಪತಿ ಅಶೋಕ್ನನ್ನು ಕುಡಚಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Next Story