ಬೀದರ್ | ಯೂರಿಯಾ ಗೊಬ್ಬರು ತಿಂದು 12 ಮೇಕೆಗಳು ಸಾವು
ಬೀದರ್ : ಯೂರಿಯಾ ಗೊಬ್ಬರು ತಿಂದು ಗಣಪತಿರಾವ್ ಅವರಿಗೆ ಸೇರಿದ 12 ಮೇಕೆಗಳು ಸಾವನಪ್ಪಿದ ಘಟನೆ ಭಾಲ್ಕಿ ತಾಲ್ಲೂಕಿನ ಹಾಲಹಿಪ್ಪರ್ಗಾ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ಮುಂಜಾನೆ ಎಂದಿನಂತೆ ಮೇಕೆಗಳು ಮೇಯಿಸಲು ಮನೆಯಿಂದ ಹೊಲಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಖಾಲಿಯಿದ್ದ ತೊಗರಿ ಹೋಲದಲ್ಲಿ ಮೇಯಿಸುತ್ತಿದ್ದಾಗ ಹೊಲದಲ್ಲಿ ಇಟ್ಟಿದ್ದ ಯೂರಿಯಾ ಗೊಬ್ಬರು ತಿಂದು ಸಾವನಾಪ್ಪಿದೆ ಎಂದು ತಿಳಿದು ಬಂದಿದೆ.
ಯೂರಿಯಾ ಗೊಬ್ಬರು ತಿಂದು ಮೇಕೆಗಳು ಅಸ್ವಸ್ಥವಾಗಿ ನೆಲಕ್ಕೆ ಬಿದ್ದದ್ದು ನೋಡಿದ ಗಣಪತಿರಾವ್ ತಕ್ಷಣವೇ ಧನ್ನುರ್ ಪಶುವೈದ್ಯರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲಿನ ಪಶುವೈದ್ಯ ಕುರಿ ನಿಗಮದ ಅಧಿಕಾರಿಗಳಿಗೆ ಘಟನೆ ಬಗ್ಗೆ ತಿಳಿಸಿದ್ದಾರೆ. ತಕ್ಷಣ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬರುವಷ್ಟರಲ್ಲಿ 12 ಮೇಕೆಗಳು ಸಾವನಪ್ಪಿದ್ದವು ಇನ್ನು ಕೆಲವು ಮೇಕೆಗಳ ಜೀವ ಉಳಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.
ಅಧಿಕಾರಿಗಳು ಬಂದು 12 ಮೃತ ಮೇಕೆಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಸರಕಾರದಿಂದ ಬರುವ ಅನುಗ್ರಹ ಯೋಜನೆ ಅಡಿಯಲ್ಲಿ ಸಾವನಪ್ಪಿದ ಪ್ರತಿ ಮೇಕೆಗಳಿಗೆ 5 ಸಾವಿರ ರೂ. ತಕ್ಷಣವೇ ಮಂಜೂರು ಮಾಡಲಾಗುತ್ತದೆ ಎಂದು ಭರವಸೆ ನೀಡಿ, ಕುರಿಗಾಹಿ ಗಣಪತಿ ಅವರಿಗೆ ಧೈರ್ಯ ತುಂಬಿದರು.