ಬೀದರ್ | ನಗ್ನತೆಯನ್ನು ಸ್ವಾತಂತ್ರ್ಯ ಎಂದು ಬಣ್ಣಿಸಲಾಗುತ್ತಿದೆ : ಮೊಹಮ್ಮದ್ ಕುಂಞಿ
ಕುರ್ಆನ್ ಪ್ರವಚನ ಕಾರ್ಯಕ್ರಮ
ಬೀದರ್ : ಬಂಡವಾಳಶಾಹಿಗಳು 21ನೇ ಶತಮಾನದಲ್ಲಿ ನಗ್ನತೆಯನ್ನು ಸ್ವಾತಂತ್ರ್ಯ ಎಂದು ಕರೆದು ವ್ಯವಹಾರ ನಡೆಸುತ್ತಿದ್ದಾರೆ. ಇದಕ್ಕೆ ನಮ್ಮ ಸಂಸ್ಕೃತಿ ಬಲಿಯಾಗಿ ಮಹಿಳೆ ಇನ್ನಷ್ಟು ಶೋಷಣೆಗೆ ಒಳಗಾಗುವಂತೆ ಮಾಡಿದೆ ಎಂದು ಖ್ಯಾತ ಪ್ರವಚನಕಾರರಾದ ಮೊಹಮ್ಮದ್ ಕುಂಞಿ ಹೇಳಿದರು.
ಶನಿವಾರ ಬಸವಕಲ್ಯಾಣದ ಸಭಾಭವನದಲ್ಲಿ ಆಯೋಜಿಸಲಾದ ಕುರ್ಆನ್ ಪ್ರವಚನ ಕಾರ್ಯಕ್ರಮದ ಎರಡನೇ ದಿನ ಆಯೋಜಿಸಲಾದ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಆಧುನಿಕ ಸಮಾಜದಲ್ಲಿ ಮಹಿಳೆಯು ಸುರಕ್ಷಿತವಾಗಿಲ್ಲ. ಮಹಿಳೆ ಎಂದರೆ ಸೌಂದರ್ಯ, ಶರೀರ, ಭೋಗದ ವಸ್ತು ಎಂಬಂತೆ ಈ ಜಗತ್ತಿನಲ್ಲಿ ಕಲ್ಪಿಸಲಾಗುತ್ತಿದೆ. ಎಲ್ಲಾ ಕಾಲಗಳಲ್ಲಿ ಮಹಿಳೆ ಶೋಷಣೆಗೆ ಒಳಗಾಗಿದ್ದಾಳೆ. 6ನೇ ಶತಮಾನದ ಪ್ರವಾದಿ ಅವರ ಕಾಲದಲ್ಲಿ ಹೆಣ್ಣು ಮಕ್ಕಳನ್ನು ಜೀವಂತ ಹೊಳಲಾಗುತ್ತಿತ್ತು. ಆದರೆ 20ನೇ ಶತಮಾನದಲ್ಲಿ ಭ್ರೂಣಹತ್ಯೆ ಮಾಡಲಾಗುತ್ತಿದೆ. 21ನೇ ಶತಮಾನದಲ್ಲಿ ಹೆಣ್ಣು ಮಗು ಭಾರವಾಗಿ ಕಾಣಲಾಗುತ್ತಿದೆ. ದೇವರು ಮಕ್ಕಳನ್ನು ಮಾತ್ರ ಸೃಷ್ಟಿಸಿದ್ದಾನೆ. ವಯಸ್ಕರನ್ನು ಸೃಷ್ಟಿಸಿಲ್ಲ ಎಂದರು.
ಪುರುಷರಿಗೆ ಹೇಗೆ ಪರಿಪೂರ್ಣ ಬಟ್ಟೆಯು ಅವನ ಘನತೆ, ಗೌರವ ಮತ್ತು ಸ್ವಾಭಿಮಾನ ಹೆಚ್ಚಿಸುತ್ತದೆಯೋ ಅದೇ ರೀತಿಯಲ್ಲಿ ಹೆಣ್ಣು ಮಕ್ಕಳ ಪರಿಪೂರ್ಣ ಬಟ್ಟೆಗಳು ಮಹಿಳೆಯ ಸ್ವಾಭಿಮಾನ, ಘನತೆ, ಗೌರವ ಹೆಚ್ಚಿಸುತ್ತದೆ. ಪುರುಷ ಮತ್ತು ಮಹಿಳೆಯರ ಸಂಬಂಧಗಳಲ್ಲಿ ಇತಿಮಿತಿಗಳು ಇರುವುದು ಅಗತ್ಯವಿದೆ. ಮಗಳು ವಿಧವೆಯಾಗಿ ಮನೆಗೆ ಮರಳಿದಾಗ ಅವಳೊಂದಗೆ ಸೌಜನ್ಯದಿಂದ ನಡೆದುಕೊಳುವ ತಂದೆ-ತಾಯಿಯ ಕೆಲಸ ಪುಣ್ಯದ ಕೆಲಸ ಎಂದು ಪ್ರವಾದಿ ಹೇಳಿದ್ದಾರೆ ಎಂದರು.
ಮನುಷ್ಯತ್ವ ಪ್ರಶ್ನಿಸಲ್ಪಡುತ್ತಿರುವ ಕಾಲ ಇದಾಗಿದೆ. ಧರ್ಮದ ವಿಷಯದಲ್ಲಿ ಹಗೆತನ, ದ್ವೇಷ, ಅಪನಂಬಿಕೆ ಗೊಡೆಯನ್ನು ಕಟ್ಟಲಾಗುತ್ತಿದೆ. ಸಹೋದರತ್ವದ ಸೇತುವೆ ಕಟ್ಟಬೇಕಾಗಿದೆ. ಗಂಡು-ಹೆಣ್ಣು ಪರಸ್ಪರ ಜೊಡಿಗಳು ಎಂದು ಕುರ್ಆನ್ ವಿವರಿಸುತ್ತದೆ. ಆದರೆ ಆಧುನಿಕ ಜಗತ್ತಲ್ಲಿ ಎಲ್.ಕೆ.ಜಿ ಯಿಂದ 60 ವರ್ಷದ ವೈದ್ದೆಯನ್ನು ಲೆಕ್ಕಿಸದೆ ಅತ್ಯಾಚಾರ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಗು ಒಳ್ಳೆವನಾಗಿ, ಕೆಟ್ಟವನಾಗಿ ರೂಪುಗೊಳ್ಳಲು ತಂದೆ-ತಾಯಿಯೇ ಕಾರಣರಾಗುತ್ತಾರೆ. ಅವರೊದಿಗೆ ಮಾತನಾಡಬೇಕು. ಅವರಿಗೆ ಸಮಯ ನೀಡಬೇಕು. ನಿಮ್ಮ ಮಕ್ಕಳ ಆಸಕ್ತಿ ಎನು ಎಂಬುದನ್ನು ತಿಳಿದುಕೊಳ್ಳಬೇಕು. ಅವರ ಚಲನವಲನ ಗಮನಿಸಬೇಕು. ಮಕ್ಕಳ ಮೇಲೆ ವಿಪರಿತ ಭರವಸೆ ಇಟ್ಟುಕೊಳ್ಳದೆ, ಎಚ್ಚರಿಕೆ ವಹಿಸಿ. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಎಂದರು.
ಮೊಹಮ್ಮದ್ ಯುಸುಫ್ ಕಣ್ಣಿ ಮಾತನಾಡಿ, ಮಕ್ಕಳನ್ನು ದೇಶದ ಒಳ್ಳೆಯ ನಾಯಕ ಮತ್ತು ಸಮಾಜದ ಹಿತಕ್ಕಾಗಿ ಕೆಲಸ ಮಾಡುವ ಉದ್ದೇಶದಿಂದ ಬೆಳಸುವ ಕೆಲಸ ಪೋಷಕರ ಮೇಲಿದೆ. ಕುರ್ಆನ್ ಪ್ರವಚನ ಒಂದು ಧರ್ಮ ಮತ್ತು ಜಾತಿಗಳಿಗೆ ಒಂದು ಸಂದೇಶ ನೀಡಿದೆ. ಪುರುಷರಿಗೆ ಇರುವ ಗೌರವ ಮಹಿಳೆಯರಿಗೂ ಇದೆ ಎಂಬುದು ನೆನಪಿನಲ್ಲಿಡಬೇಕು ಎಂದು ಹೇಳಿದರು.
ತಹಶಿಲ್ದಾರ್ ದತ್ತಾತ್ರೇಯ, ಮಲ್ಲಿಕಾರ್ಜುನ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಬಿಯುದ್ದೀನ್ ಜರೆಘರ್, ಹಫೀಝ್ ಮುಝಮ್ಮಿಲ್ ಬಾಗ್, ಸುಜಾತಾ ಪಾಟೀಲ್, ಹಫೀಝ್ ಮುಹಮ್ಮದ್ ಮುಜಾಹಿದ್, ಜಮಾತೆ ಇಸ್ಲಾಮಿ ಹಿಂದ್ ಸದಸ್ಯ ಫರ್ಝಾನಾ ನಜ್ಮಿ ಭೋಸ್ಗೆ ಸಾಹೇಬ, ತಹಶೀಲ್ದಾರ್ ದತ್ತಾತ್ರೇಯ, ಮಲ್ಲಿಕಾರ್ಜುನ ಬಿ.ಗುಂಗೆ, ಡಾ.ಗುರು ಲಿಂಗಪ್ಪ ಧಬಾಳೆ, ಶರಿಯಾ ಪಂಚಾಯತ್ ಅಧ್ಯಕ್ಷ ಮೌಲಾನಾ ಅಬ್ದುಸ್ ಸಲಾಮ್ , ಜಮಾತ್-ಎ-ಇಸ್ಲಾಮಿ ಹಿಂದ್ನ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಯೂಸುಫ್ ಕನ್ನಿ, ಜಮಾತೆ ಇಸ್ಲಾಮಿ ಹಿಂದ್ ಸದಸ್ಯ ಮುಹಮ್ಮದ್ ಯೂಸುಫುದ್ದೀನ್ ನಿಲಾಂಗೆ ಹಾಗೂ ಅನೇಕರು ಭಾಗವಹಿಸಿದ್ದರು.