ಬೀದರ್ | ನೀರು ಶುದ್ದೀಕರಣ ಘಟಕದಲ್ಲಿ ಅನಿಲ ಸೋರಿಕೆ; ಇಬ್ಬರು ಅಸ್ವಸ್ಥ
ಬೀದರ್ : ನೀರು ಶುದ್ಧೀಕರಣ ಘಟಕದಲ್ಲಿ ಕ್ಲೋರಿನ್ ಗ್ಯಾಸ್ ಸೋರಿಕೆಯಾಗಿ ಇಬ್ಬರು ಅಸ್ವಸ್ಥರಾದ ಘಟನೆ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ.
ಘಟನೆಯಲ್ಲಿ ಒಬ್ಬ ಬಾಲಕಿ ಮತ್ತು ಮಹಿಳೆಯೊಬ್ಬಳು ಅಸ್ವಸ್ಥರಾಗಿದ್ದು, ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಲ್ಲಿನ ವೈದ್ಯರು ಮಾಹಿತಿ ನೀಡಿದ್ದಾರೆ.
ಭಾಲ್ಕಿ-ಹುಮನಾಬಾದ್ ರಸ್ತೆಯಲ್ಲಿರುವ ನೀರು ಶುದ್ಧೀಕರಣ ಘಟಕದಲ್ಲಿ ಈ ಘಟನೆ ಜರುಗಿದೆ. ಸುದ್ಧಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳ ತಂಡ ಗ್ಯಾಸ್ ಸೋರಿಕೆಯಾಗಿದ್ದನ್ನು ತಡೆದು ಅನಾಹುತವೊಂದನ್ನು ತಪ್ಪಿಸಿದ್ದಾರೆ.
Next Story