ಬೀದರ್ | ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಹಣಮಂತ ಮೃತ ರೈತ
ಬೀದರ್ : ಸಾಲಬಾಧೆ ತಾಳಲಾರದೆ ಕಾರಂಜಾ ಕಾಲುವೆಗೆ ಬಿದ್ದು ಯುವ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಣಜಿ ಗ್ರಾಮದ ಹತ್ತಿರ ನಡೆದಿದೆ.
ಖಟಕ ಚಿಂಚೋಳಿ ನಿವಾಸಿ ಹಣಮಂತ (32) ಮೃತ ರೈತ. ಕೃಷಿ ಜಮೀನಿನಲ್ಲಿ ಉಳುಮೆ ಮಾಡಲು 4 ಲಕ್ಷ ರೂ. ಸಾಲ ಮಾಡಿದ್ದ ಎನ್ನಲಾಗಿದೆ. ಮೂರು ವರ್ಷದಿಂದ ಹೊಲದಲ್ಲಿ ಸರಿಯಾಗಿ ಬೆಳೆ ಬೆಳೆಯಲಾಗಲಿಲ್ಲ. ಸಾಲ ತೀರಿಸಲಾಗದೆ ಡಿ.6 ರಂದು ಹೊಲಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಧನ್ನೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story