ಬೀದರ್ | ಶಾಸಕರ ಜೊತೆ ಅನುಚಿತ ವರ್ತನೆ ಆರೋಪ: ಆರ್.ಟಿ.ಒ ಇನ್ಸ್ಪೆಕ್ಟರ್ ಅಮಾನತು
ಬೀದರ್ : ಅ.29 ರಂದು ನೌಬಾದ್–ಲಾಲ್ಬಾಗ್ ಸಮೀಪ ಬೀದರ್ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಪ್ರಯಾಣಿಸುವ ವೇಳೆ ಹೆದ್ದಾರಿಯಲ್ಲಿ ಸಾರಿಗೆ ಇಲಾಖೆಯ ಮೋಟಾರ್ ವಾಹನ ಇನ್ಸ್ಪೆಕ್ಟರ್ ಮಂಜುನಾಥ ಕೊರವಿ ಅವರು ಶಾಸಕರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಶಾಸಕರೊಂದಿಗೆ ಅನುಚಿತವಾಗಿ ವರ್ತಿಸಿದ ಸಂಭಾಷಣೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಆಕ್ರೋಶಕ್ಕೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಮಂಜುನಾಥ ಕೊರವಿ ಅವರನ್ನು ಸಾರಿಗೆ ಇಲಾಖೆಯ ಕಾಗದ ಪತ್ರಗಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು.
ಅನುಚಿತವಾಗಿ ವರ್ತಸಿರುವುದಾಗಿ ಇನ್ಸ್ಪೆಕ್ಟರ್ ಮಂಜುನಾಥ ಕೊರವಿ ವಿರುದ್ಧ ಶಾಸಕ ಬೆಲ್ದಾಳೆ ಅವರು ಸರಕಾರಕ್ಕೆ ಹಕ್ಕುಚ್ಯುತಿ ಮಾಡಿರುವ ಬಗ್ಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸುರಕ್ಷತೆ ಇಲಾಖೆಯ ಆಯುಕ್ತರು ಅಮಾನತು ಅವಧಿ ಕೊನೆಗೊಂಡ ನಂತರ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.
Next Story