ಬೀದರ್ | ಭವ್ಯ ಭಾರತದ ಅಭಿವೃದ್ಧಿಯ ಜನಕ ಅಂಬೇಡ್ಕರ್ : ಗೀರಿಶ ಬದೋಲೆ
ಬೀದರ್ : ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ಮಹಾಪರಿನಿರ್ವಾಣ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೀರಿಶ ಬದೋಲೆ ನೀಲಿ ಧ್ವಜರೋಹಣ ನೆರೆವೆರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಭವ್ಯ ಭಾರತದಲ್ಲಿ ಸಂವಿಧಾನ ಮೂಲಕ ಪ್ರತಿಯೊಬ್ಬರಿಗೂ ಹಕ್ಕುಗಳು, ಕರ್ತವ್ಯಗಳು, ಸಮಾನತೆ, ಭಾವೈಕ್ಯತೆ ಮತ್ತು ಭ್ರಾತೃತ್ವ ನೀಡಿ ಅಸ್ಪೃಶ್ಯತೆ ನಿವಾರಣೆಗೆ ಪರಿಶ್ರಮ ಪಟ್ಟ ಅಂಬೇಡ್ಕರ್ ರವರು ಮಹಾಮಾನವತಾವಾದಿ ಹಾಗೂ ಭವ್ಯ ಭಾರತದ ಅಭಿವೃದ್ಧಿಯ ಜನಕರಾಗಿದ್ದಾರೆ ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಪಂಚಶೀಲ ಧ್ವಜಾರೋಹಣ ನೆರೆವೆರಿಸಿ ಮಾತನಾಡಿ ಅವರು, ಭಾರತೀಯರಾದ ಪ್ರತಿಯೊಬ್ಬರೂ ಡಾ.ಅಂಬೇಡ್ಕರ್ ರವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಪ್ರೀತಿ, ವಿಶ್ವಾಸ, ಭಾವೈಕ್ಯತೆ ಮತ್ತು ಶಾಂತಿ ಕಾಪಾಡಿಕೊಂಡು ಅಂಬೇಡ್ಕರ್ ರವರಿಗೆ ಗೌರವ ಸಲ್ಲಿಸಬೇಕಾಗಿದೆ ಎಂದು ತಿಳಿಸಿದರು
ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ಮಹಾಪರಿನಿರ್ವಾಣ ಸಮಿತಿಯ ಅಧ್ಯಕ್ಷ ಮಾರುತಿ ಬೌಧ್ದೆ, ಮಾಜಿ ಸಚಿವ ಬಂಡೆಪ್ಪಾ ಖಾಶೆಂಪೂರ, ಗೌರವಾಧ್ಯಕ್ಷ ವಿಷ್ಣುವರ್ಧನ್ ವಾಲ್ದೋಡ್ಡಿ, ಕಾರ್ಯಾಧ್ಯಕ್ಷ ಪವನ ಮಿಠಾರೆ, ಪ್ರಧಾನ ಕಾರ್ಯದರ್ಶಿ ಮಹೇಶ ಗೋರನಾಳಕರ್, ಕಾರ್ಯದರ್ಶಿ ರಾಹುಲ್ ಡಾಂಗೆ, ಖಜಾಂಚಿ ವಿನೋದ ಬಂದಗೆ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಹೆಚ್.ಎಸ್.ಸಿಂಧೂ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರೇಮಸಾಗರ ದಾಂಡೆಕರ್, ನಗರ ಸಭೆ ಪೌರಾಯುಕ್ತ ಶಿವರಾಜ ರಾಠೋಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಸುಭಾಷ ನಾಗೂರೆ, ಪ್ರಮುಖರಾದ ರಾಜಕುಮಾರ ಮೂಲಭಾರತಿ, ಬಸವರಾಜ ಮೇತ್ರೆ, ಪ್ರಶಾಂತ ದೋಡ್ಡಿ, ಸಂಗು ಚಿದ್ರಿ ಸುನೀಲ್ ಡೊಳೆ, ಸುರೇಶ ಶಿಂದೆ, ಸುಮಂತ ಕಟ್ಟಿಮನಿ, ಅರುಣ ಪಟೇಲ್, ಓಂಪ್ರಕಾಶ್ ರೋಟ್ಟೆ, ಬಸವರಾಜ ಪವಾರ, ರಾಜಕುಮಾರ ಕಾಂಬಳೆ, ಅಭಿ ಕಾಳೆ, ಪ್ರದೀಪ್ ಜಂಜಿರೆ, ಮುಕೇಶ್ ರಾಯ್ ಬಾಬುರಾವ ಮಿಠಾರೆ,ರಾಹುಲ್ ಹಾಲೆಪೂರ್ಗಿಕರ್, ಶ್ರೀಮಂತ ಜೋಷಿ, ರವಿ ಭೂಸಂಡೆ, ವಿನೊದ ಗುಪ್ತಾ, ವಿನಿತ ಗಿರಿ, ಅಜಯ ದೀನೆ ಪಪ್ಪು ಹಾರೂರಗೇರಿ, ಕರಣ ಜಡಗೆ, ದೀಪಕ್ ದಿಲ್ಲೆ, ಸೋನು ವಾಲ್ದೋಡ್ಡಿ, ಜಗದೀಶ್ ಬಿರಾದರ, ಉದಯ ನಾಯಕ, ಅಮೃತ ಮುತಂಗಿಕರ್, ಸಂತೋಷ ಏಣಕೂರೆ, ಡಾ.ಮದನಾ ವೈಜಿನಾಥ, ಸುಧ್ದಾಮಣಿ ಗುಪ್ತಾ, ಬೌಧ್ದ ಉಪಾಸಕ ಉಪಾಸಕಿಯರು ವಿವಿಧ ಸಮಾಜ ಗಣ್ಯರು , ಹೋರಾಟಗಾರು, ಸಂಘಟನೆಗಳ ಮುಖ್ಯಸ್ಥರು, ಅಧಿಕಾರಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ವೇಳೆಯಲ್ಲಿ ಗಣ್ಯರೆಲ್ಲರೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.