ಬೀದರ್ | ಅಲ್ಪಸಂಖ್ಯಾತರ ಶಾಲಾ-ಕಾಲೇಜ್‌ನಲ್ಲಿ ಭೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೀದರ್ : ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ-ಕಾಲೇಜು, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಭೋಧಕರ ಹುದ್ದೆಗಳಿಗೆ ಗೌರವಧನ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುದ್ದೆಗಳ ವಿವರ :
ಭೌತಶಾಸ್ತ್ರ 4, ರಸಾಯನಶಾಸ್ತ್ರ 3, ಗಣಿತಶಾಸ್ತ್ರ 3, ಜೀವಶಾಸ್ತ್ರ 3, ಕನ್ನಡ 3, ಆಂಗ್ಲ 3, ಉರ್ದು 2, ಇತಿಹಾಸ 1, ಅರ್ಥಶಾಸ್ತ್ರ 1, ವ್ಯವಹಾರ ಅಧ್ಯಾಯನ 1 ಮತ್ತು ಲೆಕ್ಕಶಾಸ್ತ್ರ 1 ಹೀಗೆ ಒಟ್ಟು 25 ಭೋದಕ ಹುದ್ದೆಗಳು ಖಾಲಿ ಇರುತ್ತವೆ ಎಂದು ವಿವರಿಸಿದ್ದಾರೆ.
ವಸತಿ ಶಾಲೆ, ಕಾಲೇಜು ಹಾಗೂ ಮಾಸಿಕ ಗೌರವಧನದ ವಿವರ :
ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಕಾಲೇಜು ಬೀದರ್ ಹಾಗೂ ಬಂಬಳಗಿ ಮತ್ತು ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ 18,150 ರೂ., ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ 12 ಸಾವಿರ ರೂ. ಗೌರವಧನ ನೀಡಲಾಗುವುದು ಎಂದು ವಿವರಿಸಿದ್ದಾರೆ.
ಆಸಕ್ತ ಅಭ್ಯರ್ಥಿಗಳು ಒಂದು ವರ್ಷದ ಅವಧಿಗೆ, ಖಾಯಂ ಉಪನ್ಯಾಸಕರು ನೇಮಕಾತಿ ಆಗುವವರೆಗೆ (ಯಾವುದು ಮೊದಲೋ ಅದನ್ನು ಪರಿಗಣಿಸಿ) ತಾತ್ಕಾಲಿಕ ಅತಿಥಿ ಉಪನ್ಯಾಸಕರುಗಳ ಹುದ್ದೆಗೆ ಅರ್ಜಿಯನ್ನು https://forms.gle/pYmhxKySdCw2dPmM7 ರಲ್ಲಿ ಆನ್‌ಲೈನ್ ಮೂಲಕ ಮೇ.15 ರ ಒಳಗಾಗಿ ಸಲ್ಲಿಸಿ, ಧೃಡೀಕೃತ ದಾಖಲೆಗಳ ಪ್ರತಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿಗೆ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.