ಬೀದರ್ ಎಟಿಎಂ ದರೋಡೆ ಪ್ರಕರಣ: ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಸೇರಿ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲು

ಬೀದರ್: ಗುರುವಾರ ನಡೆದ ಎಟಿಎಂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಬಿಐ ಬ್ಯಾಂಕ್ ಮ್ಯಾನೇಜರ್ ಸೇರಿ ನಾಲ್ಕು ಜನರ ವಿರುದ್ಧ ನಗರದ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಯುವಕನ ಸಹೋದರ ಗಿರಿ ನಾಗರಾಜ್ ಅವರು ನೀಡಿದ ದೂರಿನ ಮೇರೆಗೆ ಎಸ್‌ಬಿಐ ಮುಖ್ಯ ಬ್ಯಾಂಕಿನ ಮ್ಯಾನೇಜರ್, ಸಿಎಂಎಸ್ ಕಂಪನಿಯ ಚೀಫ್ ಹಾಗೂ ಇಬ್ಬರು ಅಪರಿಚಿತ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.
"ದುಷ್ಕರ್ಮಿಗಳು ಬ್ಯಾಂಕಿನ ಹಣವನ್ನು ಕಳ್ಳತನ ಮಾಡುವ ಉದ್ದೇಶದಿಂದ ನನ್ನ ಸಹೋದರ ಗಿರಿವೆಂಕಟೇಶ್ ಗೆ ಪಿಸ್ತೂಲ್ ನಿಂದ ಫೈರ್ ಮಾಡಿ ಕೊಲೆ ಮಾಡಿ, ಶಿವು ಎಂಬಾತನನ್ನು ಗಾಯಗೊಳಿಸಿ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ. ಇದರ ಬಗ್ಗೆ ನಿರ್ಲಕ್ಷ ತೋರಿಸಿದ ಎಸ್‌ಬಿಐ ಬ್ಯಾಂಕಿನ ಮ್ಯಾನೇಜರ್ ಹಾಗೂ ಸಿಎಂಎಸ್ ಕಂಪನಿಯ ಚೀಫ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story