ಬೀದರ್ | ರಕ್ತದಾನದ ಕುರಿತು ಜಾಗೃತಿ ಅಭಿಯಾನ
ಬೀದರ್ : ಜಿಲ್ಲಾ ಪೊಲೀಸ್ ಮತ್ತು ಬ್ರಿಮ್ಸ್ ಆಸ್ಪತ್ರೆಯ ಸಮನ್ವಯದಲ್ಲಿ 3 ಕೆಆರ್ಎರ್ಎನ್ಸಿಸಿ ಬೀದರ್ ವತಿಯಿಂದ ́ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ರೈಸಿಂಗ್ʼ ದಿನದ ನಿಮಿತ್ತ ರಕ್ತದಾನ ಶಿಬಿರದ ಕುರಿತು ಜಾಗೃತಿ ಜಾಥಾ ಮತ್ತು ಬ್ರಿಮ್ಸ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ 9 ಗಂಟೆಗೆ ರಕ್ತದಾನ ಜಾಗೃತಿ ರ್ಯಾಲಿಯು ಬ್ರಿಮ್ಸ್ ಆಸ್ಪತ್ರೆಯಿಂದ ಪ್ರಾರಂಭಗೊಂಡು ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ನೆಹರು ಕ್ರೀಡಾಂಗಣದ ಮೂಲಕ ಮರಳಿ ಬ್ರಿಮ್ಸ್ ಆಸ್ಪತ್ರೆಗೆ ತಲುಪಿತು.
ರ್ಯಾಲಿಯಲ್ಲಿ 120 ಎನ್ಸಿಸಿ ಕೆಡೆಟ್ಗಳು ಭಾಗವಹಿಸಿದ್ದು, 50 ಕೆಡೆಟ್ಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಗ್ರೂಪ್ ಕ್ಯಾಪ್ಟನ್ ವಿಎನ್ಎಲ್ ರೆಡ್ಡಿ, ಕಮಾಂಡಿಂಗ್ ಆಫೀಸರ್ 3 ಕೆಆರ್ಎರ್ಎನ್ಸಿಸಿ, ಎನ್ಸಿಸಿ ಸಿಬ್ಬಂದಿ, ಫ್ಲೈಟ್ ಲೆಫ್ಟಿನೆಂಟ್ ಅನೂಪ್ ಕುಮಾರ್ ಎಲಿಯಾ, ಎಎನ್ಒಎಫ್ ಗುರುನಾನಕ್ ದೇವ್ ಇಂಜಿನಿಯರಿಂಗ್ ಕಾಲೇಜು, ಫ್ಲೈಯಿಂಗ್ ಆಫೀಸರ್ ನಾಗರಾಜ್, ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎಎನ್ಒಎಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.