ಬೀದರ್ | ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯ ಅಂಗವಾಗಿ ರಕ್ತದಾನ ಶಿಬಿರ

ಮುಹಮ್ಮದ್ ಅಸಾದುದ್ದೀನ್
ಬೀದರ್ : ಎ.14 ರಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಎಂ.ಡಿ.ಅಲೀಮುದ್ದೀನ್ ಫೌಂಡೇಶನ್ & ಮೂವ್ಮೆಂಟ್ ಆಫ್ ಜಸ್ಟೀಸ್ ಇವರ ಸಹಯೋಗದಲ್ಲಿ ಮೆಗಾ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಮ್ಯಾನೇಜಿಂಗ್ ಟ್ರಸ್ಟಿಗಳಾದ ಮುಹಮ್ಮದ್ ಅಸಾದುದ್ದೀನ್ ಹಾಗೂ ಸೈಯದ್ ಸರ್ಫರಾಜ್ ಹಶ್ಮಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಬಳಿ ಇರುವ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಂದು ಬೆಳಿಗ್ಗೆ 10 ರಿಂದ ಬೆಳಿಗ್ಗೆ 5 ಗಂಟೆವರೆಗೆ ಈ ರಕ್ತದಾನ ಶಿಬಿರ ನಡೆಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
18 ರಿಂದ 60 ವರ್ಷ ವಯಸ್ಸಿನ ಜನರು ರಕ್ತದಾನ ಮಾಡಬಹುದು. ದಾನಿಗಳಿಂದ ಸಂಗ್ರಹಿಸಿದ ಒಂದು ಯೂನಿಟ್ ರಕ್ತವು ಮೂರು ಜನರ ಜೀವವನ್ನು ಉಳಿಸಬಹುದು. ವಿಶೇಷವಾಗಿ ಯುವಕರು ಈ ಶಿಬಿರಕ್ಕೆ ಭೇಟಿ ನೀಡಿ ರಕ್ತದಾನ ಮಾಡಬಹುದು ಎಂದವರು ತಿಳಿಸಿದ್ದಾರೆ.
Next Story