ಬೀದರ್ | ಮಹಾ ಪರಿನಿರ್ವಾಣ ದಿನ ನಿಮಿತ್ತ ರಕ್ತದಾನ ಶಿಬಿರ
ಬೀದರ್ : ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ನಿಮಿತ್ತ ಇಲ್ಲಿಯ ಹಾರೂರಗೇರಿಯ ಬೌದ್ಧ ವಿಹಾರದಲ್ಲಿ ಶುಕ್ರವಾರ ರಕ್ತದಾನ ಶಿಬಿರ ನಡೆಯಿತು.
ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಯುವಕರು ಹಾಗೂ ಸಾರ್ವಜನಿಕರು ಸೇರಿದಂತೆ 35 ಮಂದಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.
ಮುಖಂಡರಾದ ವಿನೋದಕುಮಾರ್ ಅಪ್ಪೆ, ಅರ್ಜುನ್ ಹಾವೆ, ನಗರಸಭೆ ಸದಸ್ಯ ಸೂರ್ಯಕಾಂತ್ ಸಾಧುರೆ, ಅರ್ಜುನ್ ಬನ್ನೇರ್, ಗಣೇಶ್ ಹಾವೆ, ವಿಶಾಲ್ ಅಪ್ಪೆ ಮತ್ತಿತರರು ಉಪಸ್ಥಿತರಿದ್ದರು. ಬುದ್ಧ, ಬಸವ, ಭೀಮ ಎಜುಕೇಷನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಹಾಗೂ ಅಪೆಕ್ಸ್ ಆಸ್ಪತ್ರೆ ಬ್ಲಡ್ ಬ್ಯಾಂಕ್ ವತಿಯಿಂದ ಶಿಬಿರ ಹಮ್ಮಿಕೊಳ್ಳಲಾಗಿತ್ತು.
Next Story