ಬೀದರ್ | ಜಾನುವಾರು ಗಣತಿ ಕಾರ್ಯ ಯಶಸ್ವಿಗೊಳಿಸಲು ಸಹಕರಿಸಿ : ಸಿಇಓ ಡಾ.ಗಿರೀಶ ಬದೋಲೆ
ಬೀದರ್ : ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಬರುವ ಗ್ರಾಮ ಪಂಚಾಯತ್ ಪಿಡಿಓಗಳಿಗೆ ಜಾನುವಾರು ಗಣತಿ ಸಮಯದಲ್ಲಿ ಎಣಿಕೆದಾರರು ಹಾಗೂ ಮೇಲ್ವಿಚಾರಕರು ಗ್ರಾಮಕ್ಕೆ ಭೇಟಿ ನೀಡಿದ ಸಮಯದಲ್ಲಿ ಪಂಚಾಯತ್ ವಾಟರ್ ಮ್ಯಾನ್ ಹಾಗೂ ಇತರೆ ಸಿಬ್ಬಂದಿಗಳು ಗಣತಿದಾರರ ಸಹಕಾರದೊಂದಿಗೆ ಜಿಲ್ಲೆಯ ಗ್ರಾಮಸ್ಥರು, ಸಾರ್ವಜನಿಕರು ಹಾಗೂ ರೈತಬಾಂಧವರಲ್ಲಿರುವ ಜಾನುವಾರುಗಳ ಸಂಪೂರ್ಣ ಮಾಹಿತಿಯನ್ನು ನೀಡಿ ಜಾನುವಾರು ಗಣತಿ ಕಾರ್ಯ ಯಶ್ವಸಿಗೊಳಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಸೂಚಿಸಿದರು.
ಡಿ.6 ರಿಂದ ಮಾ.31 ರವರೆಗೆ ರಾಷ್ಟಾದ್ಯಂತ ಹಮ್ಮಿಕೊಂಡಿರುವ 21ನೇ ಜಾನುವಾರು ಗಣತಿ ಕಾರ್ಯಕ್ರಮಕ್ಕೆ ತಮ್ಮ ನಿವಾಸದಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಪನಿರ್ದೇಶಕರಾದ ಡಾ.ನರಸಪ್ಪಾ ಎ.ಡಿ., ಡಾ.ಗೌತಮ ಅರಳಿ, ಡಾ.ಉದಯಕುಮಾರ ಡಾ.ವಿಕ್ರಂ ಚಾಕೊತೆ, ಡಾ.ಜಗದೀಶ ಬಿರಾದಾರ ಹಾಗೂ ಇಲಾಖೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Next Story