ಬೀದರ್ | ಟೋಕರೆ ಕೋಳಿ ಸಮುದಾಯಕ್ಕೆ ಸ್ಮಶಾನ ಭೂಮಿ ಮಂಜೂರು ಮಾಡಲು ಒತ್ತಾಯ
ಬೀದರ್ : ನಗರ ಪ್ರದೇಶದಲ್ಲಿ ಅಥವಾ ನಗರದಿಂದ ಸಮೀಪದಲ್ಲಿ ಪರಿಶಿಷ್ಟ ಪಂಗಡದಲ್ಲಿರುವ ಟೋಕರೆ ಕೋಳಿ ಸಮುದಾಯಕ್ಕೆ 5 ಏಕರೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು ಎಂದು ಸರಕಾರದ ಕಾರ್ಯದರ್ಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ರಂದೀಪ್ ಡಿ. ಅವರಿಗೆ ಟೋಕರೆ ಕೋಳಿ ಸಮಾಜದ ಮುಖಂಡರು ಮನವಿ ಪತ್ರ ಸಲ್ಲಿಸಿದರು.
ಬೀದರ್ ಜಿಲ್ಲೆಯಲ್ಲಿ ಟೋಕರೆ ಕೋಳಿ ಸಮುದಾಯದ ಜನಸಂಖ್ಯೆ ಸುಮಾರು 2 ಲಕ್ಷ ಕ್ಕೂ ಅಧಿಕ ಇದ್ದು, ಈ ಸಮಾಜದ ವ್ಯಕ್ತಿಗಳು ಮೃತ್ಯಪಟ್ಟರೆ ಅಂತ್ಯಕ್ರಿಯೆ ಮಾಡಲು ಸ್ಮಶಾನ ಭೂಮಿ ಇಲ್ಲದೇ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ಪರಿಶಿಷ್ಟ ಪಂಗಡದಲ್ಲಿರುವ ಟೋಕರೆ ಕೋಳಿ ಸಮಾಜಕ್ಕೆ ಸ್ಮಶಾನ ಭೂಮಿಗಾಗಿ 5 ಎಕರೆ ಜಮೀನು ಮಂಜೂರು ಮಾಡಬೇಕು ಎಂದಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಟೋಕರೆ ಕೋಳಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಂಡುರಂಗ್ ಗುರುಜಿ, ಉಪಾಧ್ಯಕ್ಷ ಸುನೀಲ ಖಾಸೆಂಪೂರ್, ಜಿಲ್ಲಾ ಸಂಚಾಲಕ ಸುನೀಲ ಭಾವಿಕಟ್ಟಿ, ಕಾರ್ಯದರ್ಶಿ ಮಾರುತಿ ಮಾಸ್ಟರ, ಶರಣಪ್ಪಾ ಶಾಸೆಂಪೂರ್,ಚಂದ್ರಕಾಂತ, ಹಳ್ಳಿಖೇಡಕರ್, ಅರುಣಕುಮಾರ ಬಾವಗಿ, ಭೀಮರಾವ ಮಾಸ್ಟರ್ ಸೇರಿದಂತೆ ಇತರರು ಇದ್ದರು.