ಬೀದರ್ | ಯೋಜನಾಬದ್ಧ ಕ್ರಿಯಾ ಯೋಜನೆಗಳನ್ನು ರೂಪಿಸಿ : ಸ್ಟೀವನ್ ಲಾರೆನ್ಸ್
ಬೀದರ್ : ಸಿಬ್ಬಂದಿಗಳು ಕಾರ್ಯಕ್ರಮಗಳ ಯೋಜನೆಗಳಿಗೆ ಬದ್ಧವಾದ ಕ್ರಿಯಾ ಯೋಜನೆಯನ್ನು ರೂಪಿಸಬೇಕು ಎಂದು ಡಾನ್ ಬೊಸ್ಕೊ ನಿರ್ದೇಶಕ ಸ್ಟೀವನ್ ಲಾರೆನ್ಸ್ ಅವರು ಹೇಳಿದ್ದಾರೆ.
ನಗರದ ಕುಂಬಾರವಾಡಾ ಬಡಾವಣೆಯಲ್ಲಿ ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆ, ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿ ಸ್ವಯಂ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ʼಪೋಷಕತ್ವ ಮತ್ತು ದತ್ತು ಕ್ರಿಯೆ ಯೋಜನೆಗಳ ಕುರಿತು ಸಿಬ್ಬಂದಿಗಳಿಗೆ ತರಬೇತಿʼ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ತಮ್ಮ ಜೀವನುದ್ದಕ್ಕೂ ಒತ್ತಡಕ್ಕೊಳಗಾಗದೇ ತಮ್ಮ ದೈನಂದಿನ ಕಾರ್ಯಕ್ರಮಗಳಲ್ಲಿ ಪೋಷಕತ್ವ 2015, ಬಾಲ ನ್ಯಾಯ ಕಾಯ್ದೆ 84 ರ ಉಪ ಪರಿಚ್ಛೇದ ಪ್ರಕಾರ ತಮ್ಮ ಸಮುದಾಯದಲ್ಲಿ ಏಕ ಪೋಷಕತ್ವ ಅಥವಾ ದ್ವಿಪೋಷಕತ್ವ ಮಕ್ಕಳಲ್ಲಿ ಕಂಡು ಬಂದಲ್ಲಿ ಪೋಷಕತ್ವ ಯೋಜನೆಗೆ ಸಂಪರ್ಕಿಸಲು ಕರೆ ನೀಡಿದರು.
ಡಾನ್ ಬೊಸ್ಕೋ ಪೋಷಕತ್ವ ಯೋಜನೆ ಜಿಲ್ಲಾ ಸಂಯೋಜಕ ಶೀಮಪ್ಪಾ ಬಿ.ಸರ್ಕುರೆ ಅವರು ಮಾತನಾಡಿ, ಸಿಬ್ಬಂದಿ ವರ್ಗದವರಿಗೆ ದತ್ತು ಪ್ರಕ್ರಿಯೆ ಕಾಯ್ದೆ ಪ್ರಕಾರ 2015, ಬಾಲ ನ್ಯಾಯ ಕಾಯ್ದೆ ಉಪ ಕಲಂ 42 ಕುರಿತು ದತ್ತು ಮಾಶಾಚರಣೆ ಪ್ರತಿಜ್ಞಾ ವಿಧಿ ಬೋಧಿಸಿ, ಸಿಬ್ಬಂದಿಗಳಿಗೆ 4 ವರ್ಷಗೊಳಪಟ್ಟ ಶಿಶುಗಳಿಗೆ ದತ್ತು ಪಡೆಯಲು ಪತಿ, ಪತ್ನಿ ಸೇರಿಕೊಂಡು, 85 ವರ್ಷ ಮೇಲ್ಪಟ್ಟಿರಬೇಕು. 4 ವರ್ಷ ಮೇಲ್ಪಟ್ಟು 8 ವರ್ಷದವರೆಗೆ ಮಕ್ಕಳನ್ನು ದತ್ತು ಪಡೆಯಲು ಪತಿ, ಪತ್ನಿ ಸೇರಿಕೊಂಡು, 95 ವರ್ಷ ಮೇಲಾಗಿರಬೇಕು. ಅದೇ ರೀತಿ 8ರಿಂದ 18 ವರ್ಷದ ಒಳಗಡೆ ದತ್ತು ಪಡೆಯಲು 110 ಪತಿ, ಪತ್ನಿ ವಯಸ್ಸು ಇರಬೇಕೆಂದು ಮಾಹಿತಿ ನೀಡಿ, ಜಿಲ್ಲಾ ಮಕ್ಕಳ ರಕ್ಷಣೆ ಘಟಕ ಸಂಬಂಧಪಟ್ಟ ಹಾಗೂ ಡಾನ್ ಬೊಸ್ಕೊ ಸಮಾಜ ಸೇವಾ ಸಂಸ್ಥೆ ಸಂಪರ್ಕಿಸಲು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಸ್ವಯಂ ಸೇವಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ್ ಸ್ವಾಮಿ ಅವರು ಮಾತನಾಡಿ, ಪ್ರತಿಯೊಂದು ಸಿಬ್ಬಂದಿ ಗ್ರಾಮೀಣ ಹಾಗೂ ನಗರ, ಹಿಂದುಳಿದ ಪ್ರದೇಶಗಳಲ್ಲಿ ಅವಶ್ಯಕತೆ ಇರುವ ಹೆಣ್ಣು ಮಕ್ಕಳಿಗೆ ಪ್ರಯೋಜಕತ್ವ ಮತ್ತು ಪೋಷಕತ್ವ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅತಿಥಿಗಳಾಗಿ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಶಿವಕುಮಾರ್, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಆನಂದ್, ಆಪ್ತ ಸಮಾಲೋಚಕ ಶ್ರೀಮಂತ್ ಅವರು ಆಗಮಿಸಿದ್ದರು.
ಟ್ರಕ್ಕರ್ ಮತ್ತು ಟಿಐ ಯೋಜನೆ ಸಿಬ್ಬಂದಿಗಳು ಸಂಪರ್ಕ ಕಾರ್ಯಕರ್ತರು ಉಪಸ್ಥಿತರಿದ್ದರು. ಶಿವಕುಮಾರ್ ಸ್ವಾಮಿ ಅವರು ಸ್ವಾಗತಿಸಿದರು. ಆನಂದ್ ಅವರು ಕಾರ್ಯಕ್ರಮ ನಿರೂಪಿಸಿದರು. ಸಂಜುಕುಮಾರ್ ಅವರು ವಂದಿಸಿದರು.